ಒಮೈಕ್ರಾನ್​ ಭೀತಿ: ವಿಶ್ವದಲ್ಲಿ ಇವತ್ತು ಏನೇನಾಯ್ತು?

masthmagaa.com:

ಒಮೈಕ್ರಾನ್ ಭೀತಿ ನಡುವೆಯೇ ಫ್ರಾನ್ಸ್​ನಲ್ಲಿ ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಸಡನ್ ಆಗಿ ಏರಿಕೆಯಾಗಿದೆ. ಐಸಿಯುನಲ್ಲಿದ್ದ ಕೊರೋನಾ ರೋಗಿಗಳ ಸಂಖ್ಯೆ 117ರಿಂದ 1749ಕ್ಕೆ ಏರಿಕೆಯಾಗಿದ್ರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 470ರಿಂದ 9,860ಕ್ಕೆ ಏರಿಕೆಯಾಗಿದೆ. ಇದು ಮಾರ್ಚ್ ಬಳಿಕ ಫ್ರಾನ್ಸ್​​ನಲ್ಲಿ ಒಂದು ದಿನಕ್ಕೆ ಇಷ್ಟು ಕೇಸ್ ದಾಖಲಾಗಿರೋದು ಇದೇ ಮೊದಲು. ಕಳೆದ ವಾರಕ್ಕೆ ಹೋಲಿಸಿದ್ರೆ ಈ ವಾರ ಕೊರೋನಾ ಪೀಡಿತರ ಸಂಖ್ಯೆಯಲ್ಲಿ 18 ಪರ್ಸೆಂಟ್ ಜಾಸ್ತಿಯಾಗಿದೆ. ವಾರದಿಂದ ವಾರಕ್ಕೆ ಇಷ್ಟು ಪ್ರಮಾಣದಲ್ಲಿ ಕೊರೋನಾ ಜಾಸ್ತಿಯಾಗಿರೋದು ಈ ವರ್ಷದಲ್ಲಿ ಇದೇ ಮೊದಲಾಗಿದೆ. ಫ್ರಾನ್ಸ್​​​​​​ನಲ್ಲಿ ಪ್ರತಿದಿನ ಸರಾಸರಿ 30 ಸಾವಿರ ಪ್ರಕರಣಗಳು ಪತ್ತೆಯಾಗ್ತಿದೆ.

ಒಮೈಕ್ರಾನ್ ತಳಿಯಿಂದ ಈವರೆಗೆ ಯಾರೂ ಸಾವನ್ನಪ್ಪಿಲ್ಲ. ಇದು ಎಷ್ಟು ಹರಡೋ ಸಾಮರ್ಥ್ಯ ಹೊಂದಿದೆ..? ಲಸಿಕೆ ಪರಿಣಾಮಕಾರಿನಾ? ಅನ್ನೋದು ಸ್ಪಷ್ಟವಾಗಿಲ್ಲ. ಆದ್ರೆ ಪಶ್ಚಿಮ ಯೂರೋಪ್​ ದೇಶಗಳಲ್ಲಿ ಡೈಲಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಹೀಗಾಗಿ ಹಲವು ದೇಶಗಳು ಮಾಸ್ಕ್ ಧರಿಸೋದು, ಸಾಮಾಜಿಕ ಅಂತರ ಕಾಯ್ದುಕೊಳ್ಳೋದು, ಕರ್ಫ್ಯೂ, ಲಾಕ್​ಡೌನ್​ನಂತ ನಿರ್ಬಂಧಗಳನ್ನು ವಿಧಿಸೋಕೆ ಶುರು ಮಾಡಿವೆ.

ವಿಶ್ವದೆಲ್ಲೆಡೆ ಒಮೈಕ್ರಾನ್ ಆತಂಕ ಮನೆ ಮಾಡಿದೆ. ಆದ್ರೆ ಇದು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಅಷ್ಟೇ ಅಲ್ಲ.. ಇದ್ರಿಂದಾಗಿ ಲಾಕ್​ಡೌನ್ ಅಥವಾ ಪ್ರಯಾಣ ನಿರ್ಬಂಧವನ್ನು ವಿಸ್ತರಿಸುವ ಅಗತ್ಯತೆ ಇದೆ ಅಂತ ನನಗೆ ಅನ್ನಿಸುತ್ತಿಲ್ಲ ಅಂತ ಹೇಳಿದ್ದಾರೆ.

ಕೆನಡಾದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಈ ಸೋಂಕು ಪತ್ತೆಯಾಗಿರೋ ದೇಶಗಳಿಂದ ಬಂದಿರೋ 115 ಮಂದಿ ಪ್ರಯಾಣಿಕರನ್ನು ಕರೆಸಿ, ಐಸೋಲೇಷನ್​​ಗೆ ಒಳಪಡಿಸಲಾಗಿದೆ. ಟೆಸ್ಟ್ ಕೂಡ ಮಾಡಲಾಗಿದೆ ಅಂತ ಕೆನಡಾ ಆರೋಗ್ಯ ಇಲಾಖೆ ತಿಳಿಸಿದೆ.

ಸ್ಪೇನ್​​ನಲ್ಲಿ ಮೊದಲ ಒಮೈಕ್ರಾನ್ ಪ್ರಕರಣ ಪತ್ತೆಯಾಗಿದೆ. ಈ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ಸ್ಪೇನ್​​ಗೆ ಬಂದಿದ್ರು. ಟೆಸ್ಟ್ ಮಾಡಿದ ಬಳಿಕ ಒಮೈಕ್ರಾನ್ ತಳಿ ಅಂಟಿರೋದು ಗೊತ್ತಾಗಿದೆ, ಈಗ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.

ಈ ನಡುವೆ ಪ್ರತಿಕ್ರಿಯಿಸಿರೋ ಫೈಜರ್ ಲಸಿಕೆ ಕಂಪನಿ, ಒಮೈಕ್ರಾನ್ ತಳಿಗೂ ಲಸಿಕೆ ಅಭಿವೃದ್ಧಿಪಡಿಸುವತ್ತ ಕೆಲಸ ಮಾಡ್ತಿದ್ದೀವಿ ಅಂತ ತಿಳಿಸಿದೆ. ಮತ್ತೊಂದ್ಕಡೆ ಚೀನಾ ದಕ್ಷಿಣ ಆಫ್ರಿಕಾಗೆ 100 ಕೋಟಿ ಡೋಸ್ ಲಸಿಕೆ ನೀಡೋದಾಗಿ ಘೋಷಿಸಿದೆ.

-masthmagaa.com

Contact Us for Advertisement

Leave a Reply