ವುಹಾನ್ ಆಸ್ಪತ್ರೆಯ ಮತ್ತೊಬ್ಬ ವೈದ್ಯ ಸಾವು.. ಕೊರೋನಾಗೆ 3ನೇ ವೈದ್ಯ ಬಲಿ

-masthmagaa.com

ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡು ಸದ್ಯ ಜಗತ್ತಿನ ವಿವಿಧ ದೇಶಗಳಲ್ಲಿ ಆತಂಕ ಸೃಷ್ಟಿಸಿರೋ ಕೊರೋನಾ ವೈರಸ್​​ಗೆ ಮತ್ತೊಬ್ಬ ವೈದ್ಯ ಬಲಿಯಾಗಿದ್ದಾನೆ. ವುಹಾನ್ ಸೆಂಟ್ರಲ್ ಆಸ್ಪತ್ರೆಯ 57 ವರ್ಷದ ವೈದ್ಯ ಮೆಯಿ ಝೋಂಗ್​ಮಿಂಗ್​ ಕೊರೋನಾ ವೈರಸ್​ ತಗುಲಿ ಮೃತಪಟ್ಟಿದ್ದಾರೆ. ಈ ಮೂಲಕ ಒಂದೇ ಆಸ್ಪತ್ರೆಯ ಮೂವರು ವೈದ್ಯರು ಮಹಾಮಾರಿಗೆ ಬಲಿಯಾದಂತಾಗಿದೆ. ಮೆಯಿ ನಿಧನಕ್ಕೆ ವುಹಾನ್​ ಸೆಂಟ್ರಲ್ ಆಸ್ಪತ್ರೆ ಸಂತಾಪ ಸೂಚಿಸಿದೆ.

ಕೊರೋನಾ ವೈರಸ್​ ಬಗ್ಗೆ ಇಡೀ ವಿಶ್ವವನ್ನ ಮೊದಲು ಅಲರ್ಟ್ ಮಾಡಿದ್ದ ಇದೇ ಆಸ್ಪತ್ರೆಯ ಲೀ ವೆನ್​ಲಿಯಾಂಗ್ ಫೆಬ್ರವರಿ 7ರಂದು ಕೊರೋನಾಗೆ ಬಲಿಯಾಗಿದ್ದರು. ಲೀ ವೆನ್​ಲಿಯಾಂಗ್ ಕೆಲಸ ಮಾಡುತ್ತಿದ್ದ ವಿಭಾಗದಲ್ಲೇ ಮೇಯಿ ಝೋಂಗ್​ಮಿಂಗ್​ ಕೂಡ ಇದ್ದರು. ಇನ್ನು ಮಾರ್ಚ್​​ 1ರಂದು ಝಿಯಾಂಗ್ ಕ್ಸೆಕ್ವಿಂಗ್ ಎಂಬ ಡಾಕ್ಟರ್​​ ಕೊರೋನಾದಿಂದ ಕೊನೆಯುಸಿರೆಳೆದಿದ್ದರು. ಈ ಮೂಲಕ ಮಹಾಮಾರಿಗೆ ವುಹಾನ್ ಸೆಂಟ್ರಲ್ ಆಸ್ಪತ್ರೆಯ ಮೂವರು ವೈದ್ಯರು ಮೃತಪಟ್ಟಂತಾಗಿದೆ.

-masthmagaa.com

Contact Us for Advertisement

Leave a Reply