masthmagaa.com:

ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಬೇಕು ಅನ್ನೋ ಕೂಗು ಹಲವು ವರ್ಷಗಳಿಂದ ಕೇಳಿ ಬರ್ತಿದೆ. ಇದರಿಂದ ವಿವಿಧ ಚುನಾವಣೆಗೆ ಖರ್ಚು ಮಾಡುತ್ತಿರುವ ಸಾವಿರಾರು ಕೋಟಿ ರೂಪಾಯಿ ಉಳಿಸಬಹುದು ಅನ್ನೋದು ಇದರ ಉದ್ದೇಶ. ಈ ಬಗ್ಗೆ ಪ್ರಧಾನಿ ಮೋದಿ ಇವತ್ತು ಮಾತನಾಡಿದ್ದಾರೆ. ‘ಒನ್​ ನೇಷನ್, ಒನ್ ಎಲೆಕ್ಷನ್ ಅನ್ನೋದು ಕೇವಲ ಚರ್ಚೆ ಮಾಡುವ ವಿಚಾರವಲ್ಲ. ಇದರ ಅವಶ್ಯಕತೆ ದೇಶಕ್ಕಿದೆ. ದೇಶದ ವಿವಿಧ ಭಾಗಗಳಲ್ಲಿ ವರ್ಷದಲ್ಲಿ ಹಲವು ಚುನಾವಣೆಗಳು ನಡೆಯುತ್ತವೆ. ಇದರಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ವಿಚಾರದ ಬಗ್ಗೆ ಅಧ್ಯಯನ ನಡೀಬೇಕು. ಇದಕ್ಕೆ ಸಂಬಂಧಿಸಿಂತೆ ಈಗಿರುವ ಅಧಿಕಾರಿಗಳು ಗೈಡಿಂಗ್ ಫೋರ್ಸ್​ ಆಗಿ (ಮಾರ್ಗದರ್ಶಿಗಳಾಗಿ) ಕೆಲಸ ಮಾಡಬಹುದು’ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.

‘ಸಂವಿಧಾನ ದಿನ’ ಹಿನ್ನೆಲೆ ಆಲ್​ ಇಂಡಿಯಾ ಪ್ರಿಸೈಡಿಂಗ್ ಆಫೀಸರ್ಸ್​ ಅವರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಲೋಕಸಭೆ, ವಿಧಾನಸಭೆ ಮತ್ತು ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಒಂದೇ ವೋಟರ್​ ಲಿಸ್ಟ್​ ಅನ್ನು ಜಾರಿಗೆ ತರಬೇಕು. ಪ್ರತ್ಯೇಕ ಮತದಾರರ ಪಟ್ಟಿಯಿಂದ ಹಣ ಮತ್ತು ಮಾನವ ಸಂಪನ್ಮೂಲ ವ್ಯರ್ಥವಾಗುತ್ತೆ’ ಅಂತ ಹೇಳಿದ್ರು. ಇದೇ ವೇಳೆ ಸಂವಿಧಾನದ ಬಗ್ಗೆ ಅಧಿಕಾರಿಗಳು ಜನರಲ್ಲಿ ಅವೇರ್​ನೆಸ್​ ಅಥವಾ ಜಾಗೃತಿ ಮೂಡಿಸಬೇಕು ಅಂತ ಸೂಚಿಸಿದ್ರು.

-masthmagaa.com

Contact Us for Advertisement

Leave a Reply