ಸಿದ್ದರಾಮಯ್ಯ V/S ಮೂಲ ಕಾಂಗ್ರೆಸ್ಸಿಗರು..! ಗೆಲ್ಲೋದು ಯಾರು..?

ವಿಧಾನಸಭೆ ಅಧಿವೇಶನಕ್ಕೆ ಇನ್ನು 1 ದಿನ ಬಾಕಿ ಇದೆ. ನಾಳೆಯಿಂದಲೇ 3 ದಿನಗಳ ವಿಧಾನಸಭೆ ಅಧಿವೇಶನ ನಡೆಯಲಿದೆ. ಆದ್ರೆ ಇನ್ನೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪಕ್ಷ ನಾಯಕ ಯಾರು ಅನ್ನೋದು ಘೋಷಣೆಯಾಗೋ ಸಾಧ್ಯತೆ ಇದೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಅಡಕತ್ತರಿಯಲ್ಲಿ ಸಿಲುಕಿದ್ದು ವಿಪಕ್ಷ ನಾಯಕನ ಆಯ್ಕೆ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ.

ಕಾಂಗ್ರೆಸ್‍ನ ಬಹುತೇಕ ಶಾಸಕರು ಸಿದ್ದರಾಮಯ್ಯ ವಿಪಕ್ಷ ನಾಯಕರಾಗಬೇಕು ಎಂದು ಒಲವು ವ್ಯಕ್ತಪಡಿಸಿದ್ರೆ, ಮೂಲ ಕಾಂಗ್ರೆಸ್ಸಿಗರು ಮಾತ್ರ ಸಿದ್ದರಾಮಯ್ಯ ಬೇಡ. ಹೀಗಾಗಿ ಬೇರೆ ಯಾರನ್ನಾದರೂ ವಿಪಕ್ಷ ನಾಯಕರನ್ನಾಗಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಆದ್ರೆ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್‍ನ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದ್ದರು.

ಈ ಸಭೆಗೆ 63 ಜನರಿಗೆ ಆಹ್ವಾನ ನೀಡಿದ್ದರೂ 54 ಮಂದಿ ಭಾಗಿಯಾಗಿದ್ದರು. ಅವರಲ್ಲಿ 43 ಮಂದಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದರು. ಅಲ್ಲದೆ ಕಾಂಗ್ರೆಸ್ ಶಾಸಕರ ಪೈಕಿ 52 ಮಂದಿ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಸಹಿ ಹಾಕಿದ್ದಾರೆ. ಈ ಪಟ್ಟಿ ಈಗ ಸೋನಿಯಾ ಗಾಂಧಿ ಕೈ ಸೇರಿದ್ದು, ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಆದ್ರೆ ಮೂಲ ಕಾಂಗ್ರೆಸ್ಸಿಗರು ಮಾತ್ರ ವಿಪಕ್ಷ ನಾಯಕನ ಆಯ್ಕೆಗೆ ಶಾಸಕರ ಬೆಂಬಲದ ಅಗತ್ಯವಿಲ್ಲ. ಸಿದ್ದರಾಮಯ್ಯ ಅಂತೂ ಬೇಡ್ವೇ ಬೇಡ ಎಂದು ಸಂದೇಶ ರವಾನಿಸಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋ ಕುತೂಹಲ ಮೂಡಿದೆ.

Contact Us for Advertisement

Leave a Reply