ಕೊರೋನಾ ಕಾಟ: ಭಾರತದ ಸಹಾಯಕ್ಕೆ ಧನ್ಯವಾದ ಸಲ್ಲಿಸಿದ ಚೀನಾ

masthmagaa.com:

ದೆಹಲಿ: ಕೊರೋನಾ ವೈರಸ್ ಇಡೀ ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿದೆ. ಈ ನಡುವೆ ಕೊರೋನಾ ವೈರಸನ್ನು ಚೀನಾ ವೈರಸ್, ವುಹಾನ್ ವೈರಸ್ ಅಂತ ಕರೆಯೋದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಭಾರತದ ಚೀನಾ ರಾಯಭಾರಿ ಕಚೇರಿಯ ವಕ್ತಾರ ಜಿ ರೊಂಗ್​, ಚೀನಾ ಕೊರೋನಾ ವೈರಸ್​​ನ್ನು ಸೃಷ್ಟಿ ಮಾಡಿಲ್ಲ..ಬೇರೆ ದೇಶಗಳಿಗೆ ಹರಡಿಯೂ ಇಲ್ಲ.. ಇದನ್ನು ಚೀನಾ ವೈರಸ್ ಅಥವಾ ವುಹಾನ್ ವೈರಸ್ ಎಂದು ಕರೆಯೋದು ಸರಿಯಲ್ಲ ಎಂದು ಕಿಡಿಕಾರಿದ್ರು.

ಅಂತಾರಾಷ್ಟ್ರೀಯ ಸಮುದಾಯ ಚೀನಾ ಕೊರೋನಾ ವೈರಸ್ ವಿರುದ್ಧ ಹೇಗೆ ಹೋರಾಡಿತು ಅನ್ನೋದರ ಕಡೆಗೆ ಗಮನ ಹರಿಸಬೇಕು ಅಂದ್ರು. ಜೊತೆಗೆ ಈ ಮಹಾಮಾರಿ ವಿರುದ್ಧ ಹೋರಾಡುವಲ್ಲಿ ಭಾರತ ಮತ್ತು ಚೀನಾದ ನಡುವಿನ ಸಹಕಾರವನ್ನು ಪ್ರಸ್ತಾಪಿಸಿದ ಅವರು, ಎರಡೂ ದೇಶಗಳು ಸಂವಹನವನ್ನು ಕಾಪಾಡಿಕೊಂಡಿವೆ ಮತ್ತು ಕಷ್ಟದ ಸಮಯದಲ್ಲಿ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಪರಸ್ಪರ ಬೆಂಬಲವನ್ನು ನೀಡಿವೆ ಅಂದ್ರು. ಅಲ್ಲದೆ ಭಾರತ ಕೊರೋನಾ ವಿರುದ್ಧ ಹೋರಾಡಲು ಚೀನಾಗೆ ವೈದ್ಯಕೀಯ ಸಾಮಗ್ರಿ ಕಳುಹಿಸಿತ್ತು. ಅದಕ್ಕಾಗಿ ನಾವು ಭಾರತಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply