ಯೋಧ ಸಾವು..!ಅಂತ್ಯಸಂಸ್ಕಾರಕ್ಕೆ ರಸ್ತೆ ಮೂಲಕ 2,600 ಕಿ.ಮೀ ಪ್ರಯಾಣಿಸಿದ ತಂದೆ-ತಾಯಿ..!

masthmagaa.com:

ಬೆಂಗಳೂರು: ಯೋಧರೊಬ್ಬರ ಅಂತ್ಯಸಂಸ್ಕಾರಕ್ಕೆ ಅವರ ತಂದೆ-ತಾಯಿ 2,600 ಕಿಲೋ ಮೀಟರ್​​ವರೆಗೆ ರಸ್ತೆ ಮಾರ್ಗವಾಗಿಯೇ ಸಾಗಿದ್ದಾರೆ. 39 ವರ್ಷದ ಶೌರ್ಯಚಕ್ರ ಪ್ರಶಸ್ತಿ ವಿಜೇತ ಎನ್​.ಎಸ್. ಬಾಲ್ ಎಂಬ ಯೋಧರೊಬ್ಬರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅಮೃತಸರ ಮೂಲದ ಬಾಲ್​​, ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ರು.

ಇವರ ಮೃತದೇಹವನ್ನು ಅಮೃತಸರಕ್ಕೆ ಕಳುಹಿಸಲು ಸೇನೆ ವ್ಯವಸ್ಥೆ ಮಾಡಿತ್ತು. ಆದ್ರೆ ಎನ್​.ಎಸ್​.ಬಾಲ್ ಅವರ ತಂದೆ-ತಾಯಿ ಬೆಂಗಳೂರಿನಲ್ಲೇ ತಮ್ಮ ಪುತ್ರನ ಅಂತ್ಯಸಂಸ್ಕಾರ ನೆರವೇರಿಸಬೇಕೆಂಬ ಆಸೆ ಹೊಂದಿದ್ದರು. ಆದ್ರೆ ದೇಶದಲ್ಲಿ ಲಾಕ್​ಡೌನ್ ಹೇರಿರೋದ್ರಿಂದ ರಾಷ್ಟ್ರಪತಿಗಳು ಯೋಧನ ತಂದೆ-ತಾಯಿ ಬೆಂಗಳೂರಿಗೆ ಬರಲು ವಿಮಾನದ ವ್ಯವಸ್ಥೆ ಮಾಡಲಿಲ್ಲ.

ಹೀಗಾಗಿ ಬೇರೆ ದಾರಿಯಿಲ್ಲದೇ ವೀರಯೋಧ ಎನ್​​.ಎಸ್ ಬಾಲ್ ಅವರ ತಂದೆ-ತಾಯಿ ರಸ್ತೆ ಮಾರ್ಗವಾಗಿಯೇ 2,600 ಕಿಲೋಮೀಟರ್ ಪ್ರಯಾಣ ಮಾಡಿ ಬೆಂಗಳೂರಿಗೆ ಬಂದಿದ್ದಾರೆ.

-masthmagaa.com

Contact Us for Advertisement

Leave a Reply