ಇಟಲಿಯ ಪ್ರದರ್ಶನದಲ್ಲಿ 80 ವರ್ಷದ ಬುಡಕಟ್ಟು ಅಜ್ಜಿ ಬಿಡಿಸಿದ ಚಿತ್ರ..!

ಮಧ್ಯಪ್ರದೇಶದ 80 ವರ್ಷದ ಅಜ್ಜಿಯೊಬ್ಬರು ಬಿಡಿಸಿದ ಚಿತ್ರ ಇಟಲಿಯ ಮಿಲನ್ ನಲ್ಲಿ ನಡೆಯೋ ಪ್ರದರ್ಶನದಲ್ಲಿ ಇಡಲಾಗಿದೆ. ಉಮೇರಿಯಾ ಜಿಲ್ಲೆಯ ಲೊಹ್ರಾ ಗ್ರಾಮದ ಜೋದೈಯಾ ಭಾಯ್ ಬೈಗಾ ಎಂಬ ಬುಡಕಟ್ಟು ಜನಾಂಗದ ಅಜ್ಜಿ ಬಿಡಿಸಿರುವ ಚಿತ್ರ ಇದಾಗಿದೆ. 40 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಇವರು ಚಿತ್ರಕಲೆ ಆರಂಭಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಎಲ್ಲಾ ರೀತಿಯ ಪ್ರಾಣಿಗಳು, ನನ್ನ ಸುತ್ತಮುತ್ತಲಿನ ಪರಿಸರ ಎಲ್ಲವನ್ನೂ ಬಿಡಿಸುತ್ತೇನೆ. ನಾನು ಚಿತ್ರಕಲೆಗಾಗಿಯೇ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಾನು ಚಿತ್ರ ಬಿಡಿಸೋದು ಬಿಟ್ಟು ಬೇರೆ ಇನ್ನೇನನ್ನೂ ಮಾಡುತ್ತಿಲ್ಲ. ನಾನು ನನ್ನ ಮತ್ತು ನನ್ನ ಕುಟುಂಬಕ್ಕಾಗಿ ಏನನ್ನಾದರೂ ಮಾಡಲೇಬೇಕಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ಚಿತ್ರಕಲೆ ಗುರುತಿಸಲ್ಪಟ್ಟಿರೋದು ಸಂತಸ ತಂದಿದೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಈಕೆಯ ಪೇಂಟಿಂಗ್ ಟೀಚರ್ ಆಶಿಷ್ ಸ್ವಾಮಿ, ಈಕೆ ಚಿತ್ರಕಲೆಯಲ್ಲಿ ಮತ್ತಷ್ಟು ಮೈಲಿಗಲ್ಲುಗಳನ್ನು ತಲಪಬೇಕಿದೆ ಎಂದಿದ್ದಾರೆ.

Contact Us for Advertisement

Leave a Reply