ಐಟಿ ಈಟಿ ಬಗ್ಗೆ ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದೇನು..?

ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದ ಮೇಲಿನ ಐಟಿ ದಾಳಿ ಅಂತ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಐಟಿ ಅಧಿಕಾರಿಗಳು ಮನೆ ಶೋಧ ನಡೆಸಿದ್ದು, ನನ್ನ ಕೂರಿಸಿಕೊಂಡು ಪ್ರಶ್ನೆ ಕೇಳಿದ್ದಾರೆ. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಾನು ಸಮರ್ಪಕವಾದ ಉತ್ತರ ಕೊಟ್ಟಿದ್ದೇನೆ. ನನ್ನ ಸಂಸ್ಥೆಯ ಕೆಲವೊಂದು ಪತ್ರಗಳು ಸಿಕ್ಕಿಲ್ಲ. ಅವುಗಳೆಲ್ಲವೂ ಸಂಸ್ಥೆಗಳ ಕಚೇರಿಗಳಲ್ಲೇ ಇವೆ ಅಂದ್ರು. ಅಲ್ಲದೆ ಪ್ರಮುಖವಾಗಿ ಮೆಡಿಕಲ್ ಕಾಲೇಜಿನಲ್ಲಿ ಈ ವರ್ಷದ ಅಡ್ಮಿಷನ್ ಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದ್ರು. ಮೊದಲು ಸಿಇಟಿ ಮೂಲಕ ಅಡ್ಮಿಷನ್ ನಡೆಯುತ್ತಿತ್ತು. ಈಗ ನೀಟ್ ಮೂಲಕ ನಡೀತಿದೆ. ಈ ಹಿಂದೆ ನಮ್ಮ ಸಹೋದರ ಕಾಲೇಜಿನ ವ್ಯವಹಾರ ನೋಡಿಕೊಳ್ತಿದ್ರು. ಆದ್ರೆ 6 ತಿಂಗಳ ಹಿಂದೆ ಅವರು ತೀರಿಕೊಂಡಿದ್ದರಿಂದ ನಾನೇ ಎಲ್ಲಾ ವ್ಯವಹಾರ ನೋಡಿಕೊಳ್ತಿದ್ದೇನೆ ಅಂತ ಐಟಿ ಅಧಿಕಾರಿಗಳಿಗೆ ತಿಳಿಸಿದ್ದೇನೆ ಅಂದ್ರು. ಅಲ್ಲದೆ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸೋದಾಗಿ ಭರವಸೆ ನೀಡಿದ್ದು, ಕರೆದಾಗಲೆಲ್ಲಾ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ. ಅಲ್ಲದೆ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬೇಡಿ. ಅದ್ರಿಂದ ನಮಗೆ ಕಷ್ಟವಾಗುತ್ತೆ ಅಂತ ಮನವಿ ಮಾಡಿಕೊಂಡ್ರು.

Contact Us for Advertisement

Leave a Reply