masthmagaa.com:

ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನ ಬೆಂಬಲಿಸಿ ಮತ್ತು ‘ರೈತರಿಗೆ ಕೇಂದ್ರ ಸರ್ಕಾರ ಮಾಡಿದ ದ್ರೋಹ’ವನ್ನ ವಿರೋಧಿಸಿ ಪಂಜಾಬ್​ನ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ತಮಗೆ ಬಂದಿದ್ದ ಪದ್ಮ ವಿಭೂಷಣ ಪ್ರಶಸ್ತಿಯನ್ನ ವಾಪಸ್ ನೀಡಿದ್ದಾರೆ. ರೈತರ ಪ್ರತಿಭಟನೆಯನ್ನ ಬೆಂಬಲಿಸಿ ನಾಗರಿಕ ಪ್ರಶಸ್ತಿಯನ್ನ ಹಿಂದಿರುಗಿಸಿದ ಮೊದಲ ವ್ಯಕ್ತಿ ಇವರಾಗಿದ್ದಾರೆ. ಅಂದ್ಹಾಗೆ 92 ವರ್ಷ ವಯಸ್ಸಿನ ಪ್ರಕಾಶ್ ಸಿಂಗ್ ಬಾದಲ್ 2015ರಲ್ಲಿ ಈ ಪ್ರಶಸ್ತಿ ಪಡೆದಿದ್ದರು. ಇದು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಇದೇ ಪ್ರಕಾಶ್ ಸಿಂಗ್ ಬಾದಲ್​ ಅವರ ಶಿರೋಮಣಿ ಅಕಾಲಿ ದಳವು ಕೃಷಿ ಕಾಯ್ದೆಗಳನ್ನ ವಿರೋಧಿಸಿ NDA ಮೈತ್ರಿಕೂಟದಿಂದ ಇತ್ತೀಚೆಗೆ ಹೊರ ಬಂದಿತ್ತು.

ಮತ್ತೊಂದುಕಡೆ ಶಿರೋಮಣಿ ಅಕಾಲಿ ದಳ (ಡೆಮಾಕ್ರೆಟಿಕ್​) ಪಕ್ಷದ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಸುಖ್​ದೇವ್ ಸಿಂಗ್ ಧಿಂಡ್ಸಾ ಕೂಡ ತಮಗೆ ಬಂದಿರುವ ಪದ್ಮ ಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಲು ಮುಂದಾಗಿದ್ದಾರೆ.

-masthmagaa.com

Contact Us for Advertisement

Leave a Reply