masthmagaa.com:

ವಿಕೆಟ್​ ಕೀಪರ್-ಬ್ಯಾಟ್ಸ್​ಮನ್​ ಪಾರ್ಥಿವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಅವರ 18 ವರ್ಷಗಳ ಕ್ರಿಕೆಟ್​ ಬದುಕು ಕೂಡ ಅಂತ್ಯವಾಗಿದೆ. ಪಾರ್ಥಿವ್ ಪಟೇಲ್ 2002ರಲ್ಲಿ ಇಂಗ್ಲೆಂಡ್​ನ ನಾಟಿಂಗಮ್​ನಲ್ಲಿ ನಡೆದ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆಗ ಅವರಿಗೆ ಕೇವಲ 17 ವರ್ಷ ವಯಸ್ಸು. ಈ ಮೂಲಕ ಟೆಸ್ಟ್​ ಕ್ರಿಕೆಟ್​​ನ ಯಂಗೆಸ್ಟ್ ವಿಕೆಟ್​ ಕೀಪರ್ ಎನಿಸಿಕೊಂಡಿದ್ರು.

ಪಾರ್ಥಿವ್ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 25 ಟೆಸ್ಟ್, 38 ಏಕದಿನ ಮತ್ತು 2 ಟಿ-20 ಪಂದ್ಯಗಳನ್ನ ಆಡಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಟೆಸ್ಟ್​ ಪಂದ್ಯವೇ ಇವರ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಟೀಂ ಇಂಡಿಯಾ ಪರವಾಗಿ ಆಡಿದ್ದು ಮಾತ್ರವಲ್ಲದೆ, ರಣಜಿ ಕ್ರಿಕೆಟ್​ನಲ್ಲಿ ಗುಜರಾತ್​ ತಂಡವನ್ನ ಪ್ರತಿನಿಧಿಸಿದ್ರು. 2015ರಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯಲ್ಲಿ ಗುಜರಾತ್ ತಂಡವನ್ನ ಮುನ್ನಡೆಸಿ ಚಾಂಪಿಯನ್​ ಪಟ್ಟಕ್ಕೇರಿಸಿದ್ರು.

-masthmagaa.com

Contact Us for Advertisement

Leave a Reply