ವಿಮಾನದಲ್ಲಿ ಲಗೇಜ್ ತೂಕ ಇಳಿಸಲು 5 ಜೊತೆ ಬಟ್ಟೆ ಧರಿಸಿದ ಯುವತಿ..!

ವಿಮಾನ ಪ್ರಯಾಣಿಕರೊಬ್ಬರು ತಮ್ಮ ಲಗೇಜ್ ತೂಕ ಇಳಿಸೋ ಸಲುವಾಗಿ ಒಂದರ ಮೇಲೊಂದರಂತೆ ತುಂಬಾ ಬಟ್ಟೆ ಹಾಕಿಕೊಂಡು ಸುದ್ದಿಯಾಗಿದ್ದಾರೆ. ಪಿಲಿಪ್ಪೀನ್ಸ್​ ಮೂಲದ ಗೆಲ್ ರೋಡ್ರಿಗಜ್ ಈ ಬಗ್ಗೆ ತಮ್ಮ ಫೇಸ್​ಬುಕ್ ಅಕೌಂಟ್​​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಏರ್​​ಪೋರ್ಟ್​​ನಲ್ಲಿ ವಿಮಾನ ಸಿಬ್ಬಂದಿ ಕೇವಲ 7 ಕೆಜಿ ಲಗೇಜ್ ಮಾತ್ರ ಜೊತೆಗೆ ಒಯ್ಯಲು ಅವಕಾಶ, ಅದಕ್ಕಿಂತ ಹೆಚ್ಚಿದ್ದರೆ ಹೆಚ್ಚುವರಿ ಹಣ ಕಟ್ಟಬೇಕು ಎಂದು ಹೇಳಿದ್ದಾರೆ. ಗೆಲ್​​ ಅವರ ಸೂಟ್​ಕೇಸ್ ಬರೋಬ್ಬರಿ 9.5 ಕೆಜಿ ತೂಕವಿತ್ತು. ಆದ್ರೆ ಗೆಲ್ ರೋಡ್ರಿಗಜ್ ಹೆಚ್ಚುವರಿ ಹಣ ಪಾವತಿಸಲು ನಿರಾಕರಿಸಿದ್ದಾರೆ. ಸೂಟ್​ಕೇಸ್ ತೂಕ ಇಳಿಸಲು ಒಂದರ ಮೇಲೊಂದು ಬಟ್ಟೆ ಧರಿಸಿಕೊಂಡಿದ್ದಾರೆ. ಹೀಗೆ ಎರಡೂವರೆ ಕೆಜಿಗೂ ಅಧಿಕ ಬಟ್ಟೆ ತೆಗೆದು, ಒಂದರ ಮೇಲೊಂದು ಧರಿಸಿಕೊಂಡಿದ್ದಾರೆ. ಇದರಿಂದ ಸೂಟ್​ಕೇಸ್​​ ತೂಕ ಆರೂವರೆ ಕೆಜಿಗೆ ಇಳಿದಿದೆ. ಹೀಗೆ 5 ಜೊತೆ ಪ್ಯಾಂಟ್ ಶರ್ಟ್​​ ಮತ್ತು ಜಾಕೆಟ್ ಧರಿಸಿರೋ ಫೋಟೋ ಕೂಡ ಫೇಸ್​​ಬುಕ್​​ನಲ್ಲಿ ಶೇರ್ ಮಾಡಿದ್ದಾರೆ.

ಈ ಫೋಟೋವನ್ನು 20 ಸಾವಿರ ಜನ ಶೇರ್ ಮಾಡಿದ್ದು, 33 ಸಾವಿರ ಜನ ಕಾಮೆಂಟ್ ಮಾಡಿದ್ದಾರೆ.

 

 

Contact Us for Advertisement

Leave a Reply