ಇಂಧನ, ಕರೆಂಟ್​​ ಬೆಲೆ ಏರಿಕೆ! ತಿಂಡಿ, ತಿನಿಸು, ತರಕಾರಿ ಬೆಲೆಯೂ ಹೆಚ್ಚಳ?

masthmagaa.com:

ಅತ್ತ ನಿರಂತರವಾಗಿ ಏರಿಕೆ ಕಾಣುತ್ತಿರೋ ಪೆಟ್ರೋಲ್​ ಡೀಸೆಲ್​ ಬೆಲೆ ಇವತ್ತು ಕೂಡ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್​ ದರ 42 ಪೈಸೆ ಏರಿಕೆ ಕಂಡು 109 ರೂಪಾಯಿ 41 ಪೈಸೆ ಆಗಿದೆ. ಡೀಸೆಲ್​ ಬೆಲೆ 40 ಪೈಸೆ ಏರಿಕೆ ಕಂಡು 93 ರೂಪಾಯಿ 23 ಪೈಸೆ ಆಗಿದೆ. ಈ ಮೂಲಕ ಎರಡು ವಾರದಲ್ಲಿ 12ನೇ ಸಲ ಪೆಟ್ರೋಲ್ ಡೀಸೆಲ್ ದರ ಏರಿಕೆ ಕಂಡಿದ್ದು, ಒಟ್ಟು 8 ರೂಪಾಯಿ 40 ಪೈಸೆಯಷ್ಟು ಜಾಸ್ತಿ ಆದಂತಾಗಿದೆ. ಪೆಟ್ರೋಲ್​ ಡೀಸೆಲ್​, ಗ್ಯಾಸ್​, ಕರೆಂಟ್​ ಬೆಲೆ ಏರಿಕೆಯಿಂದಾಗಿ ಹೋಟೆಲ್‌ ತಿಂಡಿ, ತಿನಿಸುಗಳ ಬೆಲೆ, ತರಕಾರಿ, ಹಣ್ಣು ಸೇರಿದಂತೆ ಅಗತ್ಯವಸ್ತುಗಳ ಬೆಲೆ ಕೂಡ ಮಾರುಕಟ್ಟೆಯಲ್ಲಿ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.

-masthmagaa.com

Contact Us for Advertisement

Leave a Reply