ಕೊರೋನಾ ಹೋರಾಟದಲ್ಲಿ ಭಾರತಕ್ಕೆ ಅತಿದೊಡ್ಡ ಸಿಹಿಸುದ್ದಿ!

masthmagaa.com:

ದೆಹಲಿ: ಕಿಲ್ಲರ್ ಕೊರೋನಾಗೆ ಪರಿಣಾಮಕಾರಿ ಚಿಕಿತ್ಸೆ ಎನ್ನಲಾಗುತ್ತಿರುವ ಪ್ಲಾಸ್ಮಾ ಥೆರಪಿ ಭಾರತದಲ್ಲಿ ಸಕ್ಸಸ್ ಆಗಿದೆ. ಕೊರೋನಾ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿದ್ದ 49 ವರ್ಷದ ರೋಗಿಗೆ ದೆಹಲಿಯ ಸಾಖೇತ್ ಬ್ರಾಂಚ್​​​ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ಸದ್ಯ ಕೊರೋನಾ ಸೋಂಕಿತ ಚೇತರಿಸಿಕೊಂಡಿದ್ದು, ವೆಂಟಿಲೇಟರ್ ತೆಗೆಯಲಾಗಿದೆ.

ಇವರು ಏಪ್ರಿಲ್ 4ರಂದು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇವರ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಏಪ್ರಿಲ್ 5ರಂದು ವೆಂಟಿಲೇಟರ್​​​ನಲ್ಲಿ ಇಡಲಾಯ್ತು. ಇದಾದ ನಂತರ ಕುಟುಂಬಸ್ಥರ ಮನವಿ ಮೇರೆಗೆ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ನಂತರದಲ್ಲಿ ರೋಗಿಯಲ್ಲಿ ಚೇತರಿಕೆ ಕಂಡಿದ್ದು,  ಈಗ ಕಂಪ್ಲೀಟ್ ಗುಣಮುಖರಾಗಿದ್ದಾರೆ. ಈಗಾಗಲೇ 2 ಬಾರಿ ನಡೆಸಿದ ಪರೀಕ್ಷೆಯಲ್ಲಿ ಕೊರೋನಾ ಸೋಂಕು ಇಲ್ಲ ಎಂದು ರಿಪೋರ್ಟ್​ ಬಂದಿದೆ. 3ನೇ ಬಾರಿಯ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.

ಪ್ಲಾಸ್ಮಾ ಥೆರಪಿ ಅಂದ್ರೆ, ಕೊರೋನಾದಿಂದ ಗುಣಮುಖರಾಗುವ ವ್ಯಕ್ತಿಯ ರಕ್ತದ ಪ್ಲಾಸ್ಮಾವನ್ನು ಸೋಂಕಿತನಿಗೆ ನೀಡೋದು. ಗುಣಮುಖರಾದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತೆ. ಹೀಗಾಗಿ ಸೋಂಕಿತನ ದೇಹದಲ್ಲೂ ಕೊರೋನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತೆ. ಇದ್ರಿಂದ ರೋಗಿ ಗುಣಮುಖನಾಗುತ್ತಾನೆ. ಅಮೆರಿಕಾ, ಚೀನಾದಲ್ಲಿ ಈಗಾಗಲೇ ಈ ಥೆರಪಿ ಬಳಕೆಯಾಗ್ತಿದೆ.

-masthmagaa.com

Contact Us for Advertisement

Leave a Reply