ದೇಶದಲ್ಲಿ ಕೊರೋನಾಗೆ ರೆಡಿಯಾಗ್ತಿವೆ 30 ಲಸಿಕೆಗಳು..!

masthmagaa.com:

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಕೊರೋನಾ ವೈರಸ್ ಟಾಸ್ಕ್​ ಫೋರ್ಸ್ ಜೊತೆ ಸಭೆ ನಡೆಸಿದ್ರು. ಈ ವೇಳೆ ಲಸಿಕೆ ಅಭಿವೃದ್ಧಿ, ಔಷಧ ಅನ್ವೇಷಣೆ ಮತ್ತು ಪರೀಕ್ಷೆ ಬಗ್ಗೆ ಚರ್ಚೆ ನಡೆಸಿದ್ರು. ಇದೇ ವೇಳೆ ಭಾರತೀಯ ಸಂಶೋಧನಾ ಸಂಸ್ಥೆಗಳ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಈಗಾಗಲೇ 30 ಲಸಿಕೆಗಳನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗ್ತಿದ್ದು, ಇವುಗಳಲ್ಲಿ ಹಲವು ಪ್ರಯೋಗದ ಹಂತಕ್ಕೆ ಬಂದು ನಿಂತಿವೆ ಅಂತ ಸರ್ಕಾರ ತಿಳಿಸಿದೆ.

ದೇಶದಲ್ಲಿ 3 ರೀತಿಯಲ್ಲಿ ಔಷಧ ಉತ್ಪಾದನೆಗೆ ಪ್ರಯತ್ನ ನಡೆಯುತ್ತಿದೆ. ಮೊದಲನೆಯದಾಗಿ ಇರುವ ಲಸಿಕೆಯನ್ನು ಅಭಿವೃದ್ಧಿಪಡಿಸೋದು, ಎರಡನೆಯದಾಗಿ ಹೊಸದಾಗಿ ಲಸಿಕೆ ಕಂಡು ಹಿಡಿಯೋದು, ಮೂರನೆಯದಾಗಿ ಆಯುರ್ವೇದಿಕ್ ಮಾರ್ಗದಲ್ಲಿ ಔಷಧ ಕಂಡು ಹಿಡಿಯೋದು.. ಇವುಗಳಲ್ಲಿ ಯಾವುದು ಯಶಸ್ಸು ಕಾಣುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

-masthmagaa.com

Contact Us for Advertisement

Leave a Reply