ಲೋಕಸಭೆ, ರಾಜ್ಯಸಭೆ ಸೇರಿಸಿದ್ರೂ ಕಾಂಗ್ರೆಸ್​​ನ 100 ಸಂಸದರಿಲ್ಲ..!

masthmagaa.com:

ಬಿಹಾರ: ಸುಳ್ಳು ಹೇಳಿಕೊಂಡು ದೇಶವನ್ನು ಯಾಮಾರಿಸಿದ್ದ ಕಾಂಗ್ರೆಸ್​​​​ಗೆ ಇಂದು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸೇರಿಸಿದ್ರೂ 100 ಸ್ಥಾನ ಇಲ್ಲ ಅಂತ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. ಬಿಹಾರದ ಮೂರನೇ ಹಂತದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಹೇಳಿಕೊಂಡು ದೇಶಕ್ಕೆ ಕನಸುಗಳನ್ನು ತೋರಿಸಿತು. ಕಾಂಗ್ರೆಸ್ ಮೊದಲು ಬಡತನ ನಿರ್ಮೂಲನೆ ಮಾಡ್ತೀವಿ. ರೈತರ ಸಾಲ ಮನ್ನಾ ಮಾಡ್ತೀವಿ. ಒಆರ್​ಒಪಿ ಜಾರಿಗೊಳಿಸ್ತೀವಿ ಅಂತೆಲ್ಲಾ ಹೇಳಿತ್ತು. ಆದ್ರೆ ಒಂದೇ ಒಂದು ಕೆಲಸವನ್ನೂ ಮಾಡಲಿಲ್ಲ ಅಂತ ಕಿಡಿಕಾರಿದ್ರು.

ಜೊತೆಗೆ ಈಗ ಕಾಂಗ್ರೆಸ್ ಸ್ಥಿತಿ ಯಾವ ಮಟ್ಟಿಗೆ ಬಂದಿದೆ ಅಂದ್ರೆ ಲೋಕಸಭೆ, ರಾಜ್ಯಸಭೆ ಎರಡೂ ಸೇರಿಸಿದ್ರೂ 100 ಸಂಸದರು ಇಲ್ಲ. ಕೆಲವು ರಾಜ್ಯಗಳಲ್ಲಂತೂ ಕಾಂಗ್ರೆಸ್ ಖಾತೆಯನ್ನೇ ತೆರೆದಿಲ್ಲ. ಉತ್ತರ ಪ್ರದೇಶ-ಬಿಹಾರದಲ್ಲಿ ಕಾಂಗ್ರೆಸ್ ನಾಲ್ಕನೇ, 5ನೇ ಸ್ಥಾನದಲ್ಲಿದೆ. ಬೇರೆಯವರ ಕುರ್ತಾ ಹಿಡಿದು ಉಳಿದುಕೊಳ್ಳಲು ಯತ್ನಿಸುತ್ತಿದೆ ಅಂತ ವ್ಯಂಗ್ಯವಾಡಿದ್ರು.

ಇನ್ನು ಈ ಬಾರಿ ಬಿಹಾರದಲ್ಲಿ ಡಬಲ್ ಯುವರಾಜರು ಮತ್ತು ಜಂಗಲ್​ರಾಜ್ಯದ್ದು ಏನೂ ನಡೆಯೋದಿಲ್ಲ.. ಈ ಸಲ ಮತ್ತೆ ಬಿಹಾರದ ಜನ ಎನ್​ಡಿಎ ಸರ್ಕಾರವನ್ನು ಗೆಲ್ಲಿಸುತ್ತಾರೆ ಅಂತ ಕೂಡ ಭರವಸೆ ವ್ಯಕ್ತಪಡಿಸಿದ್ರು.

-masthmagaa.com

Contact Us for Advertisement

Leave a Reply