ಕಾಂಗ್ರೆಸ್ ಮತ್ತು ವಿಪಕ್ಷಗಳಿಗೆ ಮೋದಿ ಓಪನ್ ಚಾಲೆಂಜ್..! ಏನು ಗೊತ್ತಾ..?

ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ಜಮ್ಮು ಕಾಶ್ಮೀರವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ವಿಪಕ್ಷಗಳನ್ನು ತಿವಿಯುತ್ತಿದ್ದಾರೆ. ಇವತ್ತು ಪುನಃ ಮಹಾರಾಷ್ಟ್ರದಲ್ಲಿ ಕಾಶ್ಮೀರ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಮತ್ತು ವಿಪಕ್ಷ ನಾಯಕರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ವಿಚಾರದಲ್ಲಿ ನಾವು ತೆಗೆದುಕೊಂಡ ನಿರ್ಧಾರ ದೇಶವನ್ನೇ ಹಾಳು ಮಾಡುತ್ತೆ ಅಂತ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದರು. ಆದ್ರೆ 370ನೇ ವಿಧಿ ರದ್ದುಗೊಳಿಸಿ 3 ತಿಂಗಳು ಕಳೆದಿದೆ. ನಮ್ಮ ದೇಶ ಹಾಳಾಯ್ತಾ..? ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ನಾವು ಕಾಶ್ಮೀರವನ್ನು ಕಳೆದುಕೊಂಡಿದ್ದೇವೆ ಎಂದು ಮತ್ತೋರ್ವ ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಈಗ ನೋಡಿ ನಾವೇನು ಕಾಶ್ಮೀರ ಕಳೆದುಕೊಂಡಿದ್ದೇವಾ..? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜೊತೆಗೆ ಯಾರಾದ್ರೂ ವಿಪಕ್ಷ ನಾಯಕರು ಜಮ್ಮು ಕಾಶ್ಮೀರಕ್ಕೆ ಹೋಗೋದಾದ್ರೆ ನನ್ನ ಬಳಿ ಹೇಳಿ. ನಾನೇ ವ್ಯವಸ್ಥೆ ಮಾಡಿ ಕೊಡುತ್ತೇನೆ ಎಂದಿದ್ದಾರೆ.

Contact Us for Advertisement

Leave a Reply