masthmagaa.com:

ದೆಹಲಿ: ಒಂದ್ಕಡೆ ನೂತನ ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳಿ ಅಂತ ರೈತರು ಪ್ರತಿಭಟನೆ ನಡೆಸುತ್ತಿದ್ರೆ, ಮತ್ತೊಂದ್ಕಡೆ ಪ್ರಧಾನಿ ಮೋದಿ ಈ ಕೃಷಿ ಕಾನೂನುಗಳಿಂದ ರೈತರಿಗೆ ಲಾಭವಾಗಲಿದೆ ಅಂತ ಹೇಳಿದ್ದಾರೆ.

ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್​​ ಆಫ್ ಕಾಮರ್ಸ್​​ & ಇಂಡಸ್ಟ್ರಿಯ ವಾರ್ಷಿಕೋತ್ಸವ  ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾನೂನುಗಳಿಂದ ರೈತರು ಮತ್ತು ಆ ಕ್ಷೇತ್ರದವರಿಗೆ ಲಾಭವಾಗಲಿದೆ. ಆದಾಯ ವೃದ್ಧಿಯಾಗಲಿದೆ ಅಂತ ಹೇಳಿದ್ದಾರೆ.  ಈ ಹಿಂದೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ವಲಯಗಳ ನಡುವೆ ಒಂದು ಗೋಡೆ ಇತ್ತು. ಆದ್ರೆ ಈಗ ಆ ಗೋಡೆಯನ್ನು ತೆಗೆದುಹಾಕಲಾಗಿದೆ. ಇದ್ರಿಂದ ರೈತರ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾಗುತ್ತೆ. ಇದ್ರಿಂದ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಬಂಡವಾಳ ಹರಿದು ಬರಲಿದೆ. ಇದ್ರಿಂದ ನಮ್ಮ ದೇಶದ ಎಲ್ಲಾ ರೈತರಿಗೂ ಅನುಕೂಲವಾಗಲಿದೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply