ಪಿಎಂಸಿ ಬ್ಯಾಂಕ್ ಹಗರಣಕ್ಕೆ ಮೊದಲ ಬಲಿ..! ಹೃದಯ ಕಲಕುವ ಸ್ಟೋರಿ…

ಮಹಾರಾಷ್ಟ್ರ: ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕ್ ಅಂದ್ರೆ ಪಿಎಂಸಿ ಬ್ಯಾಂಕ್​ ಹಗರಣದಲ್ಲಿ ಮೊದಲ ಜೀವ ಬಲಿಯಾಗಿದೆ. ಈ ಬ್ಯಾಂಕ್​​​ನಲ್ಲಿ ಖಾತೆ ಹೊಂದಿದ್ದ ಸಂಜಯ್ ಗುಲಾಟಿ ಎಂಬುವವರು ಸಾವನ್ನಪ್ಪಿದ್ದಾರೆ. ಅವರು ಸೋಮವಾರ ಪಿಎಂಸಿ ಬ್ಯಾಂಕ್ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮನೆಗೆ ಮರಳಿದ್ದರು. ಆದ್ರೆ ಮನೆಗೆ ಬರುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

ಸಂಜಯ್ ಗುಲಾಟಿ ಮೊದಲು ಜೆಟ್ ಏರ್​ ವೇಸ್​ನಲ್ಲಿ ಇಂಜಿನಿಯರ್ ಆಗಿದ್ದರು. ಆದ್ರೆ ಇತ್ತೀಚೆಗೆ ಜೆಟ್ ಏರ್​​ವೇಸ್​ ಬಂದ್ ಆಗಿದ್ದರಿಂದ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದರು. ಇವರಲ್ಲಿ ಸಂಜಯ್ ಗುಲಾಟಿ ಕೂಡ ಒಬ್ಬರಾಗಿದ್ದರು. ಕುಟುಂಬದವರು ಮಾಹಿತಿ ನೀಡಿರುವ ಪ್ರಕಾರ ಸಂಜಯ್ ಗುಲಾಟಿ ಪಿಎಂಸಿ ಬ್ಯಾಂಕ್​ನಲ್ಲಿ 4 ಖಾತೆ ಹೊಂದಿದ್ದರು. ಅವುಗಳಲ್ಲಿ ಒಟ್ಟು 90 ಲಕ್ಷ ರೂಪಾಯಿ ಕೂಡಿಟ್ಟಿದ್ದರು. ಅವರ ಪುತ್ರ ದಿವ್ಯಾಂಗನಾಗಿದ್ದು, ಆಗಾಗ ದುಡ್ಡಿನ ಅವಶ್ಯಕತೆ ಇರುತ್ತೆ. ಆದ್ರೆ ಇತ್ತೀಚೆಗೆ ಅವರು ಬ್ಯಾಂಕ್​​ನಿಂದ ಹಣ ತೆಗೆಯಲು ಸಾಧ್ಯವಾಗದೇ ತುಂಬಾ ಬೇಸರಗೊಂಡಿದ್ದರು.

 

Contact Us for Advertisement

Leave a Reply