ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಅಂಬಾನಿ..

masthmagaa.com:

ಗುಜರಾತ್: ರಿಲಾಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದಲ್ಲಿ ಕೈಗೊಳ್ಳಲಾಗ್ತಿರುವ ಸಾಹಸಮಯ ಸುಧಾರಣೆಗಳಿಂದ ಮಾತ್ರವೇ ದೇಶದ ಆರ್ಥಿಕತೆ ಮುಂಬರುವ ವರ್ಷಗಳಲ್ಲಿ ಪ್ರಗತಿ ಹೊಂದಲಿದೆ. ಮೋದಿಯವರ ದೃಢತೆ ಮತ್ತು ಪ್ರಭಾವಶಾಲಿ ನಾಯಕತ್ವದಿಂದಾಗಿ ಭಾರತವನ್ನು ವಿಶ್ವ ಹೊಸ ಉದ್ಭವದ ರೀತಿಯಲ್ಲಿ ನೋಡುತ್ತಿದೆ. ಪ್ರಧಾನಿ ಮೋದಿಯವರ ಆತ್ಮವಿಶ್ವಾಸ ಮತ್ತು ದೃಢತೆ ಇಡೀ ದೇಶ ಮುನ್ನಡೆಯಲು ಪ್ರೇರಣೆ ನೀಡಿದೆ ಅಂತ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರ ಆತ್ಮನಿರ್ಭರ್ ಭಾರತ್ ಯೋಜನೆಯನ್ನು ಕೂಡ ಮುಕೇಶ್ ಅಂಬಾನಿ ಹೊಗಳಿದ್ರು.

-masthmagaa.com

Contact Us for Advertisement

Leave a Reply