masthmagaa.com:

ಕಾರಿನಲ್ಲಿ ಒಬ್ಬನೇ ವ್ಯಕ್ತಿ ಇದ್ದರೆ ಅಥವಾ ಸೈಕಲ್​ನಲ್ಲಿ ಒಬ್ಬನೇ ವ್ಯಕ್ತಿ ಹೋಗುತ್ತಿದ್ದರೆ ಅಥವಾ ಒಬ್ಬನೇ ವ್ಯಕ್ತಿ ವ್ಯಾಯಾಮ ಮಾಡುತ್ತಿದ್ದರೆ ಅಂಥವರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಇಲಾಖೆ ಯಾವುದೇ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ.

ಒಂದ್ವೇಳೆ ಕಾರಿನಲ್ಲಿ ಒಬ್ಬರಿಗಿಂತ ಹೆಚ್ಚು ಜನರಿದ್ದರೆ ಅಥವಾ ಗುಂಪು ಗುಂಪಾಗಿ ವ್ಯಾಯಾಮ ಮಾಡಿದರೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಅಗತ್ಯ ಅಂತ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾರು ಚಲಾಯಿಸುವಾಗ ಅಥವಾ ಸೈಕ್ಲಿಂಗ್ ಮಾಡುವಾಗ ಮಾಸ್ಕ್​ ಧರಿಸುವುದು ಅಗತ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜೇಶ್ ಭೂಷಣ್, ‘ಒಬ್ಬ ವ್ಯಕ್ತಿಯು ಕಾರನ್ನು ಚಲಾಯಿಸುತ್ತಿದ್ದರೆ ಅಥವಾ ಸೈಕಲ್ ಓಡಿಸುತ್ತಿದ್ದರೆ ಮಾಸ್ಕ್​ ಧರಿಸುವ ಬಗ್ಗೆ ಆರೋಗ್ಯ ಇಲಾಖೆಯ ಯಾವುದೇ ಮಾರ್ಗಸೂಚಿ ಇಲ್ಲ’  ಅಂತ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply