ಉಗ್ರರಿಂದ ಗುಂಡಿನ ದಾಳಿ.. 3 ವರ್ಷದ ಮಗುವನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ

masthmagaa.com:

ಜಮ್ಮು-ಕಾಶ್ಮೀರ: ಗಸ್ತು ತಿರುಗುತ್ತಿದ್ದ ಸಿಆರ್​ಪಿಎಫ್​ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಘಟನೆ ಇಂದು ಮುಂಜಾನೆ ಜಮ್ಮು-ಕಾಶ್ಮೀರದ ಸೋಪೋರ್​ನಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಸಿಆರ್​ಪಿಎಫ್ ಯೋಧ ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಮೂವರು ಯೋಧರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಅಂತ ಸಿಆರ್​ಪಿಎಫ್ ತಿಳಿಸಿದೆ.

ಸಿಆರ್​ಪಿಎಫ್ ಗಸ್ತು ಪಡೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುತ್ತಿರುವಾಗಲೇ ಪೊಲೀಸ್​ ಸಿಬ್ಬಂದಿಯೊಬ್ಬರು 3 ವರ್ಷದ ಮಗುವನ್ನು ಪವಾಡಸದೃಶ ರೀತಿಯಲ್ಲಿ ರಕ್ಷಿಸಿದ ಘಟನೆ ಕೂಡ ನಡೆದಿದೆ. ಇದನ್ನು ಸ್ವತಃ ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಮತ್ತೆ 18,653 ಜನರಿಗೆ ಸೋಂಕು.. 507 ಮಂದಿ ಸಾವು..!

ಕೆಲ ದಿನಗಳ ಹಿಂದೆ ಸಿಆರ್​ಪಿಎಫ್ ಯೋಧರನ್ನ ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಯೋಧ ಮತ್ತು 5 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ನಿನ್ನೆ ಪ್ರತೀಕಾರ ತೀರಿಸಿಕೊಂಡ ಭಾರತೀಯ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನ ಹೊಡೆದುರುಳಿಸಿತ್ತು. ಇದೀಗ ಮತ್ತೆ ಸಿಆರ್​​ಪಿಎಫ್ ಗಸ್ತು ಪಡೆಯನ್ನೇ ಉಗ್ರರು ಟಾರ್ಗೆಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply