ಪ್ರತಾಪ್ ಸಿಂಹ ಹೇಳಿಕೆಗೆ ಕಾಂಗ್ರೆಸ್ಸಿಗರು ಕಿಡಿಕಿಡಿ

ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ರೆ ಮೇಲೆ ನೋಡಿ ಉಗುಳಿದಂತೆ ಎಂದಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರತಾಪ್ ಸಿಂಹ ಬಕೆಟ್ ಪಾಲಿಟಿಕ್ಸ್ ಮಾಡ್ತಿದ್ದಾರೆ. ಮೋದಿ ಬಗ್ಗೆ ಮಾತನಾಡಿದ್ರೆ ಮೇಲೆ ನೋಡಿ ಉಗುಳಿದಂತೆ ಅಂತ ಹೇಳ್ತಾರೆ. ಯಾರೂ ದೇವರಾಗೋಕೆ ಸಾಧ್ಯವಿಲ್ಲ. ಪ್ರಧಾನಿಯವರು ಕರ್ನಾಟಕವನ್ನು ನಿರ್ಲಕ್ಷಿಸಿ, ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಹೌಡಿ ಮೋದಿಗೆ 10 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಆದ್ರೆ ಇಲ್ಲಿ 20 ಲಕ್ಷ ಕುಟುಂಬಗಳು ಮನೆ ಕಳೆದುಕೊಂಡು ಪಡದಾಡುತ್ತಿವೆ. ಪ್ರತಾಪ್ ಸಿಂಹರ ಈ ಹೇಳಿಕೆ ಭಟ್ಟಂಗಿತನವನ್ನು ತೋರಿಸುತ್ತೆ ಅಂತ ಕೆಂಡಕಾರಿದ್ದಾರೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಮಾತನಾಡಿ, ಪ್ರಧಾನಿ ಮೋದಿ ನಮ್ಮ ರಾಜ್ಯದ ಬಗ್ಗೆ ಅನುಕಂಪ ತೋರಿಸ್ತಿಲ್ಲ. ಉತ್ತರ ಕರ್ನಾಟಕದಲ್ಲಿ ನೂರಾರು ಮಂದಿ ಮೃತಪಟ್ಟಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹೀಗಿರುವಾಗ ಪ್ರತಾಪ್ ಸಿಂಹ ಈ ರೀತಿ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Contact Us for Advertisement

Leave a Reply