masthmagaa.com:

ಲಡಾಖ್​ನ ಪೂರ್ವ ಭಾಗದ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ನಡೆದ ಬೆನ್ನಲ್ಲೇ ದೇಶದಲ್ಲಿ ಚೀನಾ ವಸ್ತುಗಳನ್ನ ಬಹಿಷ್ಕರಿಸುವ ಕೂಗು ಜೋರಾಗಿ ಕೇಳಿ ಬರ್ತಿದೆ. ಗಡಿ ಕಾಯುವ ಯೋಧರು ಕೂಡ ಸೆಲ್ಫಿ ವಿಡಿಯೋ ಮಾಡಿ ಚೀನೀ ವಸ್ತುಗಳನ್ನ ಬಹಿಷ್ಕರಿಸಿ ಅಂತ ಕರೆ ನೀಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡ್ತಿವೆ.

ಇದರ ನಡುವೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕೊಂಢ್ವೆ-ಧಾವಡೆ ಎಂಬ ಗ್ರಾಮವು ಚೀನಾ ವಸ್ತುಗಳನ್ನ ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜುಲೈ 1ರಿಂದ ಇದು ಜಾರಿಗೆ ಬರಲಿದೆ. ಇದರ ಪ್ರಕಾರ ಗ್ರಾಮದ ಯಾವುದೇ ಅಂಗಡಿಯಲ್ಲಿ ಚೀನಾ ವಸ್ತುಗಳನ್ನ ಮಾರುವಂತಿಲ್ಲ. ಅದೇ ರೀತಿ ಗ್ರಾಮಸ್ಥರು ಚೀನಾ ವಸ್ತುಗಳನ್ನ ಖರೀದಿಸುವಂತಿಲ್ಲ.

ಈ ಸಂಬಂಧ ಗ್ರಾಮ ಪಂಚಾಯ್ತಿಯು ಪ್ರಕಟಣೆಯೊಂದನ್ನು ಹೊರಡಿಸಿದೆ. ಜೊತೆಗೆ ಗ್ರಾಮ ಪಂಚಾಯ್ತಿಯ ಕಂಟ್ರಾಕ್ಟರ್​ಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕಾಮಗಾರಿಗಳಲ್ಲಿ ಚೀನಾ ವಸ್ತುಗಳನ್ನ ಬಳಸಬಾರದು ಅಂತ ಸೂಚಿಸಲಾಗಿದೆ. ಅವರ ಜೊತೆ ಮಾಡಿಕೊಳ್ಳುವ ಒಪ್ಪಂದದಲ್ಲೂ ಈ ಬಗ್ಗೆ ಉಲ್ಲೇಖಿಸಲಾಗುತ್ತದೆ ಅಂತ ಗ್ರಾಮದ ಸರಪಂಚರು​ ಹೇಳಿದ್ದಾರೆ. ಈಗಾಗಲೇ ಕೊಂಢ್ವೆ-ಧಾವಡೆ ಗ್ರಾಮದ ಹಲವೆಡೆ ಚೀನಾ ವಸ್ತುಗಳನ್ನ ಬಹಿಷ್ಕರಿಸುವ ಬ್ಯಾನರ್, ಪೋಸ್ಟರ್​ಗಳು ರಾರಾಜಿಸುತ್ತಿವೆ. ಚೀನಾ ವಸ್ತುಗಳನ್ನ ಬಹಿಷ್ಕರಿಸಲು ಈ ಗ್ರಾಮ ದೇಶಕ್ಕೆ ಮಾದರಿಯಾಗುತ್ತಾ ಅನ್ನೋದನ್ನ ಕಾದು ನೋಡಬೇಕು.

ಚೀನಾ ವಸ್ತುಗಳನ್ನ ಭಾರತೀಯರು ಬಹಿಷ್ಕರಿಸಲು ಸಾಧ್ಯವೇ..? ವಿಡಿಯೋ ನೋಡಿ: https://www.youtube.com/watch?v=0HHJx-ZlpmY

-masthmagaa.com

Contact Us for Advertisement

Leave a Reply