ಬಾಹುಬಲಿ-2 ಕ್ಯೂ ಮೀರಿಸಿದ ಕೊರೋನಾ..ಲೈನ್ ನೋಡಿದ್ರೆ ತಲೆ ತಿರುಗುತ್ತೆ..!

masthmagaa.com:
ಜಗತ್ತಿನಾದ್ಯಂತ ಕೇಕೆ ಹಾಕ್ತಿರುವ ಕೊರೋನಾ ಹೆಮ್ಮಾರಿಗೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿದೆ. ಇದರಿಂದ ದೊಡ್ಡಣ್ಣ ಅಮೆರಿಕಾ ಕೂಡ ಹೊರತಾಗಿಲ್ಲ. ಸದ್ಯ ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 8,438ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 149 ಆಗಿದೆ. ಹೀಗಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧಾಜ್ಞೆ ಹೊರಡಿಸಿದ್ದಾರೆ. ಪರಿಣಾಮ ಶಾಪಿಂಗ್ ಮಾರ್ಟ್‌ವೊಂದರ ಮುಂದೆ ಜನ ಮಾರುದ್ದ ಕ್ಯೂ ನಿಂತಿದ್ದು, ಇದರ ವಿಡಿಯೋವನ್ನು ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ರಾಜಮೌಳಿಯ ಬಾಹುಬಲಿ ಪಾರ್ಟ್-2 ಸಿನಿಮಾ ನೋಡಲು ಕ್ಯೂ ನಿಂತಿದ್ದನ್ನು ಈ ಡೆಡ್ಲಿ ಕೊರೋನಾ ಮೀರಿಸಿದೆ ಅಂತ ರಾಮ್‌ಗೋಪಾಲ್ ವರ್ಮಾ ಬರೆದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಅಮೆರಿಕ ಭಯಭೀತವಾಗಿದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply