ರಾಮಾಯಣಕ್ಕೆ ಜೈ ಎಂದ ಜನ..! ದಾಖಲೆ ಬರೆದ ಹಳೆಯ ಸೀರಿಯಲ್

masthmagaa.com:

ದೆಹಲಿ: ಕೊರೋನಾದಿಂದಾಗಿ ಭಾರತ ಲಾಕ್​ಡೌನ್ ಮಾಡಿದ ಬಳಿಕ ಡಿಡಿಯಲ್ಲಿ ರಾಮಾಯಣವನ್ನು ಮರುಪ್ರಸಾರ ಮಾಡಲಾಗಿತ್ತು. ಇದೀಗ ಈ ಸೀರಿಯಲ್​​ಗೆ ಮತ್ತೆ ಯಶಸ್ಸು ಸಿಕ್ಕಿದೆ ಅನ್ನೋದು ಬಾರ್ಕ್ ಮೂಲಕ ಗೊತ್ತಾಗಿದೆ. ಬಾರ್ಕ್​ ಪ್ರಕಾರ ಕಳೆದ ವೀಕೆಂಡ್​ನಲ್ಲಿ ಶುರುವಾದ ರಾಮಾಯಣದ 4 ಶೋಗಳನ್ನು ಸುಮಾರು 17 ಕೋಟಿ ಜನ ವೀಕ್ಷಿಸಿದ್ದಾರೆ.

ಕಳೆದ ಶನಿವಾರದಂದು ಬೆಳಗ್ಗೆ ಪ್ರಸಾರವಾದ ಈ ಸೀರಿಯಲ್​​​ನ್ನು 3.4 ಕೋಟಿ ಜನ ನೋಡಿದ್ದರು. ಅದೇ ದಿನ ರಾತ್ರಿ ಪ್ರಸಾರವಾದ ಶೋವನ್ನು 4.5 ಕೋಟಿ ಜನ ವೀಕ್ಷಿಸಿದ್ದಾರೆ. ಮರುದಿನ ಈ ಸಂಖ್ಯೆಯಲ್ಲಿ ಮತ್ತಷ್ಟು ಜಾಸ್ತಿಯಾಗಿದೆ ಅಂತ ಬಾರ್ಕ್​ ಮಾಹಿತಿ ನೀಡಿದೆ. ರಮಾನಂದ ಸಾಗರ್ ನಿರ್ಮಾಣದಲ್ಲಿ ಮೂಡಿ ಬಂದ ರಾಮಾಯಣ ಧಾರವಾಹಿ ಜೆನರಲ್ ಎಂಟರ್​ಟೈನ್​​​ಮೆಂಟ್​ ಕೆಟಗರಿಯಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಧಾರವಾಹಿಯಾಗಿದೆ.

-masthmagaa.com

Contact Us for Advertisement

Leave a Reply