ಯಾವಾಗ ನಿವೃತ್ತಿ ತಗೋಬೇಕು ಅನ್ನೋದು ಧೋನಿಗೆ ಗೊತ್ತು: ರವಿಶಾಸ್ತ್ರಿ

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಯವರು ಮಾಜಿ ನಾಯಕ ಎಂ.ಎಸ್ ಧೋನಿ ಪರ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಧೋನಿ ನಿವೃತ್ತಿ ಬಗ್ಗೆ ಮಾತನಾಡುವವರಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ಧಾರೆ. ಧೋನಿ ಸುಮಾರು 15 ವರ್ಷಗಳ ಕಾಲ ದೇಶಕ್ಕಾಗಿ ಕ್ರಿಕೆಟ್ ಆಡಿದ್ದಾರೆ. ಅವರು ಕ್ರಿಕೆಟ್​​ನಿಂದ ಯಾವಾಗ ನಿವೃತ್ತಿ ಹೊಂದಬೇಕು ಅನ್ನೋದು ಅವರಿಗೆ ಗೊತ್ತಿದೆ. ಭಾರತದ ಕ್ರಿಕೆಟ್​​​ಗೆ ಧೋನಿ ಏನೆಲ್ಲಾ ಮಾಡಿದ್ದಾರೋ ಆ ಮೂಲಕ ಅವರು ಸ್ವಯಂ ನಿವೃತ್ತಿಯ ಅಧಿಕಾರ ಹೊಂದಿದ್ದಾರೆ. ಯಾವಾಗ ನಿವೃತ್ತಿಯಾಗಬೇಕು ಅನ್ನೋದನ್ನ ಅವರೇ ನಿರ್ಧರಿಸುತ್ತಾರೆ ಎಂದಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​​, ನಾವೀಗ ಧೋನಿಯವರಿಂದ ಮುಂದೆ ಬಂದಿದ್ದೇವೆ. ವಿಶ್ವಕಪ್ ಬಳಿಕ ನಾವು ಸ್ಪಷ್ಟವಾಗಿದ್ದೇವೆ. ವೃಷಭ್ ಪಂಥ್​​​ಗೆ ನಾವು ಬೆಂಬಲ ನೀಡುತ್ತಿದ್ದೇವೆ. ಅವರು ಸರಿಯಾಗಿ ಆಡದಿದ್ದರೂ ನಮ್ಮ ನಿರ್ಧಾರ ಸ್ಪಷ್ಟ ಎಂದು ಹೇಳಿದ್ದರು.

Contact Us for Advertisement

Leave a Reply