masthamagaa.com:

ಕೊರೋನಾ ಹಾವಳಿಯಿಂದ ಪಾತಾಳಕ್ಕೆ ಕುಸಿದಿರುವ ಭಾರತದ ಆರ್ಥಿಕತೆ ನಿರೀಕ್ಷೆಗಿಂತಲೂ ವೇಗವಾಗಿ ರಿಕವರ್ ಆಗ್ತಿದೆ ಅಂತ RBI ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಜೊತೆಗೆ 2021ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಮೈನಸ್ 7.5%ನಷ್ಟು ಕುಸಿಯಲಿದೆ ಅಂತ RBI ಅಂದಾಜಿಸಿದೆ. ಈ ಹಿಂದೆ 2021ರಲ್ಲಿ ದೇಶದ ಜಿಡಿಪಿ ಮೈನಸ್ 9.5%ನಷ್ಟು ಕುಸಿಯಲಿದೆ ಅಂತ RBI ಅಂದಾಜು ಮಾಡಿತ್ತು. ಆದ್ರೀಗ ಅದಕ್ಕಿಂತಲೂ ಕಡಿಮೆ ಕುಸಿಯಲಿದೆ ಅಂತ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

2020-21ರಲ್ಲಿ ಭಾರತದ ಆರ್ಥಿಕತೆ ಮೈನಸ್​ 10.3%ನಷ್ಟು ಕುಸಿಯಲಿದೆ ಅಂತ ಗೋಲ್ಡ್​ಮನ್ ಸ್ಯಾಚ್ಸ್​ ಅಂದಾಜು ಮಾಡಿದೆ. ಮೂಡಿ ಸಂಸ್ಥೆ ಮೈನಸ್ 8.9% ಅಂತ ಅಂದಾಜು ಮಾಡಿದೆ. ಆದ್ರೀಗ ಅದೆರಡಕ್ಕಿಂತಲೂ ಕಡಿಮೆ ಪ್ರಮಾಣದಲ್ಲೇ ಆರ್ಥಿಕತೆ ಕುಸಿಯಲಿದೆ ಅಂತ RBI ಅಂದಾಜಿಸಿದೆ. ಆರ್​ಬಿಐ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದ 3ನೇ ತ್ರೈಮಾಸಿಕವಾದ ಅಕ್ಟೋಬರ್​-ಡಿಸೆಂಬರ್​ನಲ್ಲಿ ಜಿಡಿಪಿ ಬೆಳವಣಿಗೆ ದರ +0.1% ಮತ್ತು 4ನೇ ತ್ರೈಮಾಸಿಕವಾದ ಜನವರಿ-ಮಾರ್ಚ್​ನಲ್ಲಿ +0.7% ಇರಲಿದೆ ಅಂತ ಪ್ರೊಜೆಕ್ಟ್ ಮಾಡಿದೆ.

ಮೊದಲ ತ್ರೈಮಾಸಿಕವಾದ ಏಪ್ರಿಲ್​-ಜೂನ್​ನಲ್ಲಿ ಜಿಡಿಪಿ ಬೆಳವಣಿಗೆ ದರ ಮೈನಸ್ 23.9% ಕುಸಿದಿತ್ತು, ಎರಡನೇ ತ್ರೈಮಾಸಿಕದಲ್ಲಿ ಮೈನಸ್ 7.5% ಇತ್ತು.

-masthmagaa.com

Contact Us for Advertisement

Leave a Reply