ತ್ರಿಪುರಾದಲ್ಲಿ ಬಿಜೆಪಿಗೆ ಬಿಗ್ ಶಾಕ್! ಕೈಕೊಟ್ಟ ಮೈತ್ರಿಪಕ್ಷ!

masthmagaa.com:

ತ್ರಿಪುರ: ಟಿಟಿಎಎಡಿಸಿ(ತ್ರಿಪುರಾ ಟ್ರೈಬಲ್ ಏರಿಯಾಸ್ ಅಟೋನಾಮಸ್ ಡಿಸ್ಟ್ರಿಕ್ಟ್​ ಕೌನ್ಸಿಲ್) ತ್ರಿಪುರ ಬುಡಕಟ್ಟು ಪ್ರದೇಶಗಳು ಸ್ವಾಯತ್ತ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿರೋ ಬಿಜೆಪಿಗೆ ಮಿತ್ರ ಪಕ್ಷವೇ ದೊಡ್ಡ ಶಾಕ್ ಕೊಟ್ಟಿದೆ. ಬಿಜೆಪಿ ಮೈತ್ರಿ ಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ(ಐಪಿಎಫ್​ಟಿ),  ತ್ರಿಪ್ಲಾಂಡ್ ಸ್ಟೇಟ್ ಪಾರ್ಟಿ ಜೊತೆ ವಿಲೀನಗೊಂಡಿದೆ.

2 ವರ್ಷಗಳ ಹಿಂದೆ ಸಿಎಎ ಮತ್ತು ಎನ್​ಆರ್​ಸಿ ವಿಚಾರವಾಗಿ ಕಾಂಗ್ರೆಸ್​​ ತ್ಯಜಿಸಿದ ಪ್ರದ್ಯೋತ್ ಮಾನಿಕ್ಯ ದೇಬ್ ಬರ್ಮನ್, ತ್ರಿಪ್ಲಾಂಡ್ ಸ್ಟೇಟ್ ಪಾರ್ಟಿ ಸ್ಥಾಪಿಸಿದ್ರು. ಈಗ ಐಪಿಎಫ್​ಟಿಯನ್ನು ತಮ್ಮ ಪಕ್ಷದಲ್ಲಿ ವಿಲೀನಗೊಳಿಸುವಲ್ಲಿ ಬರ್ಮನ್ ಯಶಸ್ವಿಯಾಗಿದ್ದು, ಅದಕ್ಕೆ ತಿಪ್ರಾಹ ಇಂಡಿಜಿನಸ್ ಪ್ರೊಗ್ರೆಸ್ಸಿವ್ ರೀಜಿನಲ್ ಅಲಾಯನ್ಸ್ ಅಂತ ಹೆಸರಿಡಲಾಗಿದೆ.

ಅಂದಹಾಗೆ ಮುಂಬರುವ ಟಿಟಿಎಎಡಿಸಿ ಚುನಾವಣೆಯಲ್ಲಿ ಬಿಜೆಪಿಯ ಮೈತ್ರಿ ಪಕ್ಷವೇ ಪ್ರಮುಖ ಎದುರಾಳಿಯಾಗಲಿದೆ. ಈ ಚುನಾವಣೆ ಕಳೆದ ವರ್ಷ ಮೇ 17ರಂದೇ ನಡೆಯಬೇಕಿತ್ತು. ಆದ್ರೆ ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಐಪಿಎಫ್​ಟಿ ಮೈತ್ರಿ ಮುರಿದುಕೊಂಡಿದ್ರಿಂದ ಬಿಜೆಪಿಗೆ ಏನೂ ತೊಂದ್ರೆ ಆಗಲ್ಲ. ಯಾಕಂದ್ರೆ ತ್ರಿಪುರಾ ವಿಧಾನಸಭೆಯಲ್ಲಿ 60 ಸ್ಥಾನಗಳಿದ್ದು, ಬಹುಮತಕ್ಕೆ 31 ಇದ್ರೆ ಸಾಕು. ಆದ್ರೆ ಬಿಜೆಪಿ ಇಲ್ಲಿ 35 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.

-masthmagaa.com

Contact Us for Advertisement

Leave a Reply