ಅಮೇಠಿಯಿಂದ ವಾದ್ರಾ ಕಣಕ್ಕೆ? ಬೀದಿಯಲ್ಲಿ ಬಕೆಟ್‌ ಹಿಡಿದ ಕೈ ಪಡೆ!

masthmagaa.com:

ಮುಂಬರೋ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋ ಬಗ್ಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವ್ರ ಅಳಿಯ ರಾಬರ್ಟ್‌ ವಾದ್ರಾ ಸುಳಿವು ನೀಡಿದ್ದಾರೆ. ಈ ಹಿಂದೆ ರಾಹುಲ್‌ ಗಾಂಧಿ ಸ್ಪರ್ಧೆ ಮಾಡಿ ಸೋತಿದ್ದ ಯುಪಿಯ ಅಮೇಠಿ ಕ್ಷೇತ್ರದಿಂದ ಸ್ಫರ್ಧೆ ಮಾಡೊ ಬಗ್ಗೆ ಮಾತನಾಡಿದ್ದಾರೆ. ʻಅಮೇಠಿ ಜನ ಬಯಸಿದ್ರೆ ನಾನು ಅಮೇಠಿಯಿಂದಲೇ ಸ್ಫರ್ಧೆ ಮಾಡ್ತೀನಿʼ ಅಂತೇಳಿದ್ದಾರೆ. ಮತ್ತೊಂದೆಡೆ ಕೇರಳದ ತಿರುವನಂತಪುರಂನಲ್ಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಮ್‌ಎಮ್‌ ಹಸನ್‌ ಲೋಕಸಭಾ ಚುನಾವಣೆಗೆ ಕೈಯಲ್ಲಿ ಬಕೆಟ್‌ ಹಿಡಿದು ಸಾರ್ವಜನಿಕರಿಂದ ಚುನಾವಣೆಗೆ ನಿಧಿ ಸಂಗ್ರಹ ಮಾಡ್ತಿದ್ದಾರೆ. ಈ ವೇಳೆ ʻಕಾಂಗ್ರೆಸ್‌ ಅಕೌಂಟ್‌ನ್ನ ಮೋದಿ ಸರ್ಕಾರ ಫ್ರೀಜ್‌ ಮಾಡ್ಸಿದೆ. ಹೀಗಾಗಿ ಜನ ಸಾಮಾನ್ಯರನ್ನ ತಲುಪಿ ಚುನಾವಣೆಯಲ್ಲಿ ಅವ್ರ ಬೆಂಬಲ ಪಡೆಯಲು ಈ ಕೆಲ್ಸ ಮಾಡ್ತಿದ್ದೇವೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply