masthmagaa.com:

ಸ್ನಾಯು ಸೆಳೆತದಿಂದ ಬಳಲುತ್ತಿದ್ದ ರೋಹಿತ್ ಶರ್ಮಾ ಫಿಟ್​ ಆಗಿದ್ದಾರೆ, ಫಿಟ್ನೆಸ್ ಟೆಸ್ಟ್​ಗಳನ್ನ ಪಾಸ್ ಮಾಡಿದ್ದಾರೆ ಅಂತ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್​ ಅಕಾಡೆಮಿಯಲ್ಲಿರುವ (NCA) ಫಿಸಿಯೋಗಳು ಘೋಷಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಮಿಸ್​ ಆಗಿದ್ದ ಆರಂಭಿಕ ಆಟಗಾರ ಮುಂಬರುವ ಟೆಸ್ಟ್ ಸರಣಿಗೆ ಲಭ್ಯವಾಗುವ ಸಾಧ್ಯತೆ ಇದೆ. ಆದ್ರೆ ಈ ಬಗ್ಗೆ BCCI ಇನ್ನೂ ಏನನ್ನೂ ಘೋಷಿಸಿಲ್ಲ. ಒಂದ್ವೇಳೆ BCCI ಗ್ರೀನ್ ಸಿಗ್ನಲ್​ ಕೊಟ್ಟರೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿಮಾನ ಹತ್ತಲಿದ್ದಾರೆ. ಅಲ್ಲಿ ಹೋದ ಮೇಲೆ 14 ದಿನ ಕ್ವಾರಂಟೈನ್​ಗೆ ಒಳಗಾಗಬೇಕಿದೆ. ಹೀಗಾಗಿ ನವೆಂಬರ್ 17ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್​ಗೆ ರೋಹಿತ್​ ಅಲಭ್ಯರಾಗಲಿದ್ಧಾರೆ. ಇಂದು ಅಥವಾ ನಾಳೆಯೊಳಗೆ ಆಸ್ಟ್ರೇಲಿಯಾ ರೀಚ್​ ಆದ್ರೆ ನವೆಂಬರ್​ 26ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಆಡುವ ಅವಕಾಶ ಸಿಗಲಿದೆ. ಇಲ್ಲದಿದ್ರೆ ಅದು ಕೂಡ ಮಿಸ್ ಆಗಲಿದೆ. ಎರಡನೇ ಟೆಸ್ಟ್​ಗೆ ರೋಹಿತ್ ಅವಶ್ಯಕತೆ ತುಂಬಾ ಇದೆ. ಯಾಕಂದ್ರೆ ಮೊದಲ ಟೆಸ್ಟ್ ಬಳಿಕ ನಾಯಕ ವಿರಾಟ್​ ಕೊಹ್ಲಿ ರಜೆ ಮೇಲೆ ತೆರಳಲಿದ್ದಾರೆ. ಹೀಗಾಗಿ 2ನೇ ಪಂದ್ಯದಲ್ಲಿ ಅವರ ಅನುಪಸ್ಥಿತಿ ಜೊತೆಗೆ ರೋಹಿತ್ ಶರ್ಮಾ ಕೂಡ ಅಲಭ್ಯರಾದ್ರೆ ಟೀಂ ಇಂಡಿಯಾಗೆ ಡಬಲ್ ಹೊಡೆತ ಬೀಳಲಿದೆ.

-masthmagaa.com

Contact Us for Advertisement

Leave a Reply