ರೋಹಿತ್ ಶರ್ಮಾ ಗರಂ ವಿಡಿಯೋ ವೈರಲ್..!

ದಕ್ಷಿಣಾ ಆಫ್ರಿಕಾ ವಿರುದ್ಧದ 3ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗರಂ ಆದ ವಿಡಿಯೋ ಒಂದು ಫುಲ್ ವೈರಲ್ ಆಗ್ತಿದೆ. ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದ ವೇಳೆ ಉಪನಾಯಕ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿದ್ರು. 12ನೇ ಓವರ್‍ನಲ್ಲಿ ಬೌಲರ್ ನವದೀಪ್ ಸೈನಿ ಬ್ಯಾಕ್ ಟು ಬ್ಯಾಕ್ ಫೋರ್ ಹೊಡೆಸಿಕೊಂಡ್ರು. ಇದ್ರಿಂದ ಸಿಟ್ಟಾದ ರೋಹಿತ್ ಶರ್ಮಾ ತಲೆ ಉಪಯೋಗಿಸಿ ಬೌಲಿಂಗ್ ಮಾಡು ಅಂತ ಸನ್ನೆ ಮಾಡಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಪಂದ್ಯದಲ್ಲಿ ಭಾರತ 20 ಓವರ್‍ಗಳಲ್ಲಿ ಕೇವಲ 134 ರನ್ ಗಳಿಸಿತ್ತು. ಶಿಖರ್ ಧವನ್ 36 ರನ್ ಗಳಿಸಿದ್ದು ಬಿಟ್ಟರೆ, ಎಲ್ಲರೂ ಅಲ್ಪಮೊತ್ತಕ್ಕೆ ಔಟ್ ಆಗಿದ್ದರು. ಕೊಹ್ಲಿ, ರೋಹಿತ್ ಶರ್ಮಾ ಕೂಡ ಒಂದಂಕಿಗೆ ಔಟಾಗಿ ಪೆವಿಲಿಯನ್ ಸೇರಿದ್ದರು. ಈ ಪಂದ್ಯವನ್ನು ಸೌತ್ ಆಫ್ರಿಕಾ 9 ವಿಕೆಟ್‍ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು.

https://twitter.com/BattingAtDubai/status/1176469027218059264

Contact Us for Advertisement

Leave a Reply