ಏಯ್ ಈಗ ಬರಬೇಡ..95 ರನ್ ಆಗಿದೆ: ಮಳೆಗೆ ರೋಹಿತ್ ಅವಾಜ್​​​

ರಾಂಚಿ: ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ನಿನ್ನೆ ಶತಕ ಸಿಡಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಶತಕಕ್ಕೂ ಮೊದಲು ನಿಧಾನ ಮಳೆಯಾಗಲು ಶುರುವಾಯ್ತು. ಆಗ ರೋಹಿತ್ ಶರ್ಮಾ 95 ರನ್ ಸಿಡಿಸಿದ್ದರು. ಆಗ ರೋಹಿತ್ ಶರ್ಮಾ ಆಕಾಶದ ಕಡೆಗೆ ನೋಡಿ, ಈಗ ಬೇಡ ಎಂದು ಸನ್ನೆ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇದಾದ ಬಳಿಕ ರೋಹಿತ್ ಶರ್ಮಾ ಸಿಕ್ಸ್ ಬಾರಿಸುವ ಮೂಲಕ ಶತಕ ಪೂರ್ಣಗೊಳಿಸಿದ್ರು. ಅಲ್ಲದೆ ನಿನ್ನೆ ವಾತಾವರಣ ಸರಿಯಿಲ್ಲದ ಕಾರಣ ಪಂದ್ಯವನ್ನು ಬೇಗನೇ ಅಂತ್ಯಗೊಳಿಸಲಾಗಿತ್ತು.

Contact Us for Advertisement

Leave a Reply