masthmagaa.com:

ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ RSSನ ಅಂಗಸಂಸ್ಥೆಯಿಂದಲೇ ಈಗ ಬೆಂಬಲ ವ್ಯಕ್ತವಾಗಿದೆ. ರೈತರ ಬೆಳೆಗಳನ್ನ ಕನಿಷ್ಠ ಬೆಂಬಲ ಬೆಲೆಯಲ್ಲೇ (MSP) ಖರೀದಿ ಮಾಡಲಾಗುತ್ತೆ ಅನ್ನೋದಕ್ಕೆ ಸರ್ಕಾರ ಲೀಗಲ್ ಗ್ಯಾರಂಟಿ ಕೊಡಬೇಕು ಅಂತ RSS ಅಂಗಸಂಸ್ಥೆಯಾದ ಸ್ವದೇಶಿ ಜಾಗ್ರಣ್​ ಮಂಚ್ (SJM) ಆಗ್ರಹಿಸಿದೆ. MSP ಕುರಿತಂತೆ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸಪೋರ್ಟ್​ ನೀಡಿದ RSSನ ಎರಡನೇ ಅಂಗಸಂಸ್ಥೆ ಇದಾಗಿದೆ. ಈ ಹಿಂದೆ ಭಾರತೀಯ ಕಿಸಾನ್ ಸಂಘ (BKS) ಕೂಡ ಕನಿಷ್ಠ ಬೆಂಬಲ ಬೆಲೆಯ ಪರವಾಗಿ ಮಾತನಾಡಿತ್ತು. ಆದ್ರೆ ಈ ಎರಡೂ ಸಂಘಟನೆಗಳು ನೂತನ ಕೃಷಿ ಕಾಯ್ದೆಗಳನ್ನೇ ಕೇಂದ್ರ ಸರ್ಕಾರ ವಾಪಸ್ ಪಡೆಯಲಿ ಅಂತ ಹೇಳ್ತಿಲ್ಲ.

-masthmagaa.com

Contact Us for Advertisement

Leave a Reply