ಕೊರೋನಾಗೆ ರೆಡಿಯಾಯ್ತು ರಷ್ಯಾ ಲಸಿಕೆ.. ಆತುರದ ಲಸಿಕೆ ಎಷ್ಟು ಸುರಕ್ಷಿತ..?

masthmagaa.com:

ಕೊರೋನಾ ವೈರಸ್​ಗೆ ರಷ್ಯಾ ಸಂಶೋಧಕರು ಅಭಿವೃದ್ಧಿಪಡಿಸಿರುವ ಲಸಿಕೆಯ ಮಾನವ ಪ್ರಯೋಗ ಸಂಪೂರ್ಣವಾಗಿ ಮುಗಿದಿದೆ ಅಂತ ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಲಸಿಕೆಯ ನೋಂದಣಿಗಾಗಿ ಕಾಗದ ಪತ್ರಗಳನ್ನ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ ಸಾಮೂಹಿಕ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ಮೊದಲ ಹಂತದಲ್ಲಿ ವೈದ್ಯರು ಮತ್ತು ಶಿಕ್ಷಕರಿಗೆ ಲಸಿಕೆ ಹಾಕಲಾಗುವುದು ಅಂತ ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೋ ಹೇಳಿದ್ದಾರೆ ಅಂತ ವರದಿಯಾಗಿದೆ.

ರಷ್ಯಾ ರಾಜಧಾನಿ ಮಾಸ್ಕೊದಲ್ಲಿರುವ ಗಮಲೇ ಇನ್​ಸ್ಟಿಟ್ಯೂಟ್​ ಈ ಲಸಿಕೆಯ ಮಾನವ ಪ್ರಯೋಗವನ್ನು ಪೂರ್ಣಗೊಳಿಸಿದೆ. ಆದ್ರೆ ಆತುರದಲ್ಲಿ ಲಸಿಕೆಯ ಮಾನವ ಪ್ರಯೋಗ ನಡೆಸಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಾನವ ಪ್ರಯೋಗದ ಮಾಹಿತಿ ಬಹಿರಂಗಪಡಿಸದಿರೋದು ಲಸಿಕೆಯ ಸುರಕ್ಷಿತತೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಇನ್ನೂ ಕೆಲವರು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ರಷ್ಯಾದ ಯಶಸ್ಸನ್ನು 1957ರಲ್ಲಿ ನಡೆದ ವಿಶ್ವದ ಮೊದಲ ಉಪಗ್ರಹ ಸ್ಪುಟ್ನಿಕ್-1ರ ಉಡಾವಣೆಗೆ ಹೋಲಿಸಿದ್ದಾರೆ.

ಕೊರೋನಾ ವೈರಸ್​ಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಸುಮಾರು 100ಕ್ಕೂ ಹೆಚ್ಚು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ ಕನಿಷ್ಠ 4 ಲಸಿಕೆಗಳು ಮೂರನೇ ಹಂತದ ಮಾನವ ಪ್ರಯೋಗ ನಡೆಸುತ್ತಿವೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅವುಗಳಲ್ಲಿ ಚೀನಾದ ಮೂರು ಲಸಿಕೆ ಮತ್ತು ಬ್ರಿಟನ್​ನ ಆಕ್ಸ್​ಫರ್ಡ್​ ಯುನಿವರ್ಸಿಟಿ-ಅಸ್ಟ್ರಾಝೆನೆಕಾ ಲಸಿಕೆ ಸೇರಿದೆ. ಆದ್ರೆ ಎಲ್ಲಾ ಹಂತದ ಮಾನವ ಪ್ರಯೋಗ ಮುಗಿಸಿದೆ ಎನ್ನಲಾಗ್ತಿರುವ ರಷ್ಯಾ ಲಸಿಕೆ ಈ ಪಟ್ಟಿಯಲ್ಲಿ ಇಲ್ಲ.

-masthmagaa.com

Contact Us for Advertisement

Leave a Reply