ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಸಾರಾ ಮಹೇಶ್​..! ಏನ್ ಅವಸ್ಥೆ ಗುರೂ…

ಮೈಸೂರು:  ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ರಾಜಕೀಯ ನಾಯಕರ ಆಣೆ-ಪ್ರಮಾಣ, ಕ್ಷಮೆಯ ನಾಟಕ ಮುಂದುವರಿದಿದೆ. ನಿನ್ನೆ ಆಣೆ ಮಾಡ್ತೀವಿ ಅಂತ ಬಂದು ಹಾಗೆಯೇ ವಾಪಸ್ ಹೋಗಿದ್ದ ಸಾರಾ ಮಹೇಶ್ ಇವತ್ತು ಪುನಃ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಚಾಮುಂಡಿ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ನಿನ್ನೆಯ ಘಟನೆ ಕುರಿತು ಚಾಮುಂಡಿ ಬಳಿ ಕ್ಷಮೆಯಾಚಿಸಿದ್ದಾರೆ.

ಆಣೆ- ಪ್ರಮಾಣದ ಚಾಲೆಂಜ್ ಮಾಡ್ಕೊಂಡು ನಿನ್ನೆ ಚಾಮುಂಡಿ ಬೆಟ್ಟಕ್ಕೆ ಬಂದಿದ್ದ ಹೆಚ್​.ವಿಶ್ವನಾಥ್ ಮತ್ತು ಸಾರಾ ಮಹೇಶ್ ಆಮೇಲೆ ಹಾಗೆಯೇ ವಾಪಸ್ ಹೋಗಿದ್ದರು. ಆಣೆ ಪ್ರಮಾಣ ಮಾಡಿರಲಿಲ್ಲ. ಈ ಬಗ್ಗೆ ಮಾಧ್ಯಮದವರು ಕೇಳಿದಾಗ, ನಾನು ಆಣೆ ಪ್ರಮಾಣ ಮಾಡೋದಕ್ಕೆ ಬಂದಿಲ್ಲ ಅಂತ ವಿಶ್ವನಾಥ್ ಹೇಳಿದ್ರೆ, ವಿಶ್ವನಾಥ್ ಪ್ರಮಾಣ ಮಾಡ್ಬೇಕು ಅಂತ ಸಾರಾ ಮಹೇಶ್ ಹೇಳಿದ್ದರು. ನಾಡದೇವತೆ ಸನ್ನಿಧಾನದಲ್ಲಿ ಈ ನಾಯಕರ ಆಣೆ ಪ್ರಮಾಣದ ರಾಜಕೀಯಕ್ಕೆ ಭಾರಿ ವಿರೋಧ ಕೂಡ ವ್ಯಕ್ತವಾಗಿತ್ತು. ಹೀಗಾಗಿ ಇಂದು ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿರೋ ಸಾರಾ ಮಹೇಶ್ ಕ್ಷಮೆಯಾಚಿಸಿದ್ದಾರೆ.

Contact Us for Advertisement

Leave a Reply