masthmagaa.com:

ಜಗತ್ತಿನಾದ್ಯಂತ ಇರುವ ಮುಸ್ಲಿಮರು ರಂಜಾನ್ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಮನೆಯಲ್ಲೇ ಪ್ರಾರ್ಥನೆ ಮಾಡಬೇಕು ಅಂತ ಸೌದಿ ಅರೇಬಿಯಾದ ಅತ್ಯುನ್ನತ ಧಾರ್ಮಿಕ ಸಂಸ್ಥೆ ಕೌನ್ಸಿಲ್ ಆಫ್ ಸೀನಿಯರ್ ಸ್ಕಾಲರ್ಸ್ ಒತ್ತಾಯಿಸಿದೆ. ಇದರ ಸದಸ್ಯರು ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಸೌದಿ ರಾಜನಿಗೆ ಸಲಹೆಗಳನ್ನು ನೀಡುತ್ತಾರೆ.

ಕೊರೋನಾ ವೈರಸ್ ಹಾವಳಿ ಹೆಚ್ಚಿರುವ ಈ ಸಂದರ್ಭದಲ್ಲಿ ಮುಸ್ಲಿಮರು ಗುಂಪು ಸೇರೋದನ್ನ ತಪ್ಪಿಸಬೇಕು. ಯಾಕಂದ್ರೆ ಅವುಗಳೇ ಸೋಂಕು ಹರಡುವಿಕೆಗೆ ಪ್ರಮುಖ ಕಾರಣ. ಅಲ್ಲದೆ ಜನರ ಜೀವವನ್ನು ಕಾಪಾಡುವುದರಿಂದ ಅವರು ದೇವರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು ಅಂತ ಕೌನ್ಸಿಲ್ ಆಫ್ ಸೀನಿಯರ್ ಸ್ಕಾಲರ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸುನ್ನಿ ಮುಸ್ಲಿಮರು ಹೆಚ್ಚಿರುವ ಸೌದಿ ಅರೇಬಿಯಾದಲ್ಲಿ ಕೊರೋನಾ ಭೀತಿಯಿಂದ ಮಸೀದಿಗಳನ್ನ ಮುಚ್ಚಲಾಗಿದೆ. ಪವಿತ್ರ ಯಾತ್ರಾ ಸ್ಥಳಗಳಾದ ಮೆಕ್ಕಾ ಹಾಗೂ ಮದೀನಾ ಕೂಡ ಬಂದ್ ಮಾಡಲಾಗಿದೆ.

ಇನ್ನು ಶಿಯಾ ಮುಸ್ಲಿಮರು ಹೆಚ್ಚಿರುವ ಇರಾನ್​ನ ಸರ್ವೋಚ್ಛ ನಾಯಕ ಅಯಾತುಲ್ಲಾ ಖಾಮಿನೈ, ಈ ಬಾರಿಯ ರಂಜಾನ್​ಗೆ ಮುಸ್ಲಿಮರು ಉಪವಾಸ ಕೈಗೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply