ಸವದತ್ತಿ ಎಲ್ಲಮ್ಮನಿಗೂ ಕೊರೋನಾ ಕಾಟ..! ದರ್ಶನ ಬಂದ್

masthmagaa.com:

ಮನುಷ್ಯರ ಜೊತೆಗೆ ದೇವರನ್ನೂ ಕಾಡ್ತಿರೋ ಕೊರೋನಾ ಹೆಮ್ಮಾರಿ, ಬೆಳಗಾವಿಯ ಸುಪ್ರಸಿದ್ದ ಸವದತ್ತಿ ಎಲ್ಲಮ್ಮನ ದೇವಾಲಯಕ್ಕೂ ತನ್ನ ಪ್ರಭಾವ ಬೀರಿದೆ. ಇಂದಿನಿಂದ 2 ವಾರಗಳ ಕಾಲ ಸವದತ್ತಿ ಎಲ್ಲಮ್ಮ ದೇವಾಲಯದಲ್ಲಿ ದರ್ಶನವನ್ನು ಬಂದ್ ಮಾಡಲಾಗಿದ್ದು, ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. . ಅರ್ಚಕರು ಎಂದಿನಂತೆ ಪೂಜಾ ಕಾರ್ಯಗಳನ್ನು ನಡೆಸಲಿದ್ದು, ಭಕ್ತರು ದೇವಾಲಯಕ್ಕೆ ಬರದಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮನವಿ ಮಾಡಿದ್ದಾರೆ. ಇನ್ನು ಸವದತ್ತಿಯ ಗಡಿ ಪ್ರದೇಶಗಳಲ್ಲಿ ಹೊರ ರಾಜ್ಯಗಳ ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ

-masthmagaa.com

Contact Us for Advertisement

Leave a Reply