masthmagaa.com:

ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕಮ್ಮಿಯಾಗ್ತಿದೆ ಅಂತ ನಿಟ್ಟುಸಿರು ಬಿಡುತ್ತಿರುವಾಗಲೇ ರಾಜ್ಯದ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಶಾಕಿಂಗ್ ವರದಿಯೊಂದನ್ನ ಕೊಟ್ಟಿದೆ. ಅದೇನಂದ್ರೆ, 2021ರ ಜನವರಿ-ಫೆಬ್ರವರಿಯಲ್ಲಿ ರಾಜ್ಯವು ಕೊರೋನಾ ಸೋಂಕಿನ ಎರಡನೇ ಅಲೆ ಎದುರಿಸುವ ಸಾಧ್ಯತೆ ಇದೆ ಎಂದಿದೆ. ಎರಡನೇ ಅಲೆ ಅಂದ್ರೆ ಕಮ್ಮಿಯಾಗಿರುವ ಕೊರೋನಾ ಹಾವಳಿ ಮತ್ತೆ ಜಾಸ್ತಿಯಾಗಿ, ಪ್ರತಿದಿನ ದೃಢಪಡುವ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗೋದು ಅಂತ ಅರ್ಥ. ಹೀಗಾಗಿ ಫೆಬ್ರವರಿವರೆಗೆ ಪ್ರತಿದಿನ 1.25 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ 8 ಪುಟಗಳ ವರದಿ ಸಲ್ಲಿಸಿರುವ ಸಮಿತಿಯು 2ನೇ ಅಲೆಯನ್ನ ಗುರುತಿಸಲು ಮತ್ತು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply