ನಂಬೋದು ಕಷ್ಟ! ಆದರೂ ಇದೆಲ್ಲಾ ನಿಜ! | Secrets of Flight Journey

ಹಾಯ್ ಫ್ರೆಂಡ್ಸ್, ವಿಮಾನದಲ್ಲಿ ಹಾರಾಟ…! ಇಡೀ ದಿನ ತೆಗೆದುಕೊಳ್ಳುವ ಪ್ರಯಾಣ ಕೇವಲ ಗಂಟೆಗಳಲ್ಲಿ ಆಗಿಹೋಗುತ್ತದೆ…! ಎಂತಹ ರೋಚಕ ಅನುಭವ ಅಲ್ವಾ.. ಆದರೆ ಇದೇ ವಿಮಾನ ಹಾರಾಟದ ಹಿಂದೆ ಏನೆಲ್ಲಾ ನಡೀತಾ ಇರುತ್ತೆ ಅನ್ನೋದು ಗೊತ್ತಾದ್ರೆ ನೀವು ಬೆಚ್ಚಿ ಬೀಳ್ತೀರಿ.. ವಿಚಾರ ಬಹಳ ಇಂಟರೆಸ್ಟಿಂಗ್ ಆಗುತ್ತೆ.. ರೋಚಕವಾಗುತ್ತೆ.. ಕೆಲವೊಂದು ವಿಚಾರ ನಿಮ್ಮಲ್ಲಿ ಹೆದರಿಕೆ ಹುಟ್ಟಿಸುತ್ತೆ. ಅಷ್ಟು ವೇಗವಾಗಿ ಬಂದು ಅಪ್ಪಳಿಸಿದರೂ ವಿಮಾನದ ಟೈರ್ ಬ್ಲಾಸ್ಟ್ ಆಗಲ್ಲ ಯಾಕೆ ಅಂತಾ ನೀವು ಯೋಚನೆ ಮಾಡುತ್ತಿರಬಹುದು.. ನಮಗೆ ವಿಮಾನದಲ್ಲಿ ಸಿಗುವ ಕುಡಿಯುವ ನೀರು ಬಹಳ ಶುದ್ಧ ಅಂತಾ ನೀವು ಅಂದುಕೊಂಡಿರಬಹುದು. ಈ ರೀತಿ ವಿಮಾನ ಪ್ರಯಾಣ ಬಗೆಗಿನ ನಿಮ್ಮ ಹಲವು ಕಲರ್ಫುಲ್ ಇಮ್ಯಾಜಿನೇಷನ್​ಗಳನ್ನ ಈಗ ನಾವು ಬರ್ಸ್ಟ್ ಮಾಡುತ್ತೇವೆ. ಸೋ ಸೀಟ್ ಬೆಲ್ಟ್ ಹಾಕಿಕೊಂಡು ರೋಚಕ ವರದಿಯನ್ನ ನೋಡಲು ರೆಡಿಯಾಗಿ.

1903ರಲ್ಲಿ ರೈಟ್ ಸಹೋದರರು ವಿಮಾನವನ್ನ ಕಂಡುಹಿಡಿದಾಗ ಒಂದುವೇಳೆ ಸಾವಿರಾರು ಅಡಿಗಳ ಎತ್ತರದಿಂದ ವಿಮಾನದಿಂದ ಕೆಳಕ್ಕೆ ಹಾರಬೇಕಾದ ಪರಿಸ್ಥಿತಿ ಬಂದರೆ ಏನು ಮಾಡಬೇಕು ಅಂತಾ ಯೋಚನೆ ಮಾಡಿರಲಿಕ್ಕಿಲ್ಲ. ನಿಮಗೆ ವಿಷಯ ಗೊತ್ತಾ..? ಆಕಾಶದ ಮಧ್ಯದಲ್ಲಿ ಏನಾದ್ರೂ ಎಮರ್ಜೆನ್ಸಿಯಾಗಿ ವಿಮಾನವನ್ನ ಬಿಟ್ಟು ಕೆಳಗೆ ಹಾರಬೇಕಾದ ಪರಿಸ್ಥಿತಿ ಬಂದರೆ ಹೆಚ್ಚಿನವರಿಗೆ ಅದನ್ನ ನೆನೆದೇ ಎದೆ ಒಡೆದು ಸತ್ತುಹೋಗುತ್ತಾರೆ. ಇನ್ನು ಧೈರ್ಯವಂತರಾಗಿದ್ದರೂ ಪ್ಯಾರಶೂಟ್ ಬೇಕೇಬೇಕು. ಕೆಳಗಡೆ ಕೆರೆ, ಸಮುದ್ರದಂತಹ ನೀರಿನ ಪ್ರದೇಶ ಇದ್ದರೂ ಕೂಡ ಕೆಳಗೆ ಬಿದ್ದರೆ ಬದುಕುವುದು ಕಷ್ಟ. ಯಾಕಂದ್ರೆ ಅಷ್ಟು ಎತ್ತರದಿಂದ ಕೆಳಗೆ ಹಾರಿದಾಗ ರಾಕೆಟ್ ವೇಗದಲ್ಲಿ ದೇಹ ಬಂದು ನೀರಿನ ಮೇಲೆ ಅಪ್ಪಳಿಸಿದರೂ ಇಂಪ್ಯಾಕ್ಟ್ ಎಷ್ಟು ಜೋರಾಗಿರುತ್ತೆ ಅಂದ್ರೆ ಪ್ರಾಣ ಹೋಗೋದು ಗ್ಯಾರಂಟಿ.

ಇದುವರೆಗೂ ಅತಿ ಎತ್ತರದಿಂದ ಹಾರಿ ಪ್ರಾಣ ಉಳಿಸಿಕೊಂಡ ದಾಖಲೆ ಯುಗೋಸ್ಲಾವಿಯಾದ Vesna Vulovnic ಹೆಸರಿನಲ್ಲಿದೆ. ಏರ್ ಹೋಸ್ಟೆಸ್ ಆಗಿದ್ದ ಈಕೆ ವಿಮಾನ ಅಪಘಾತಕ್ಕೀಡಾದಾಗ ಒಂದು ಟ್ರಾಲಿ ಮತ್ತು ಕ್ಯಾಬಿನ್ ಕ್ರೂ ಒಬ್ಬನ ಶವವನ್ನ ಹಿಡಿದುಕೊಂಡು 10,160 ಮೀಟರ್ ಎತ್ತರದಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಇದು ಗಿನ್ನೆಸ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ.

ಇನ್ನು ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರು ಯಾರಾದರೂ ಮೃತಪಟ್ಟರೆ ಶವ ಇಡಲು ಬೇರೆ ಯಾವುದೇ ವ್ಯವಸ್ಥೆಯಿಲ್ಲ. ಸೀಟಿನಲ್ಲಿಯೇ ಒರಗಿಸಿ ಶವವನ್ನ ಇಡಲಾಗುತ್ತದೆ. ಒಂದು ಕವರ್ ಹಾಕಿ ದೇಹವನ್ನ ಮುಚ್ಚಲಾಗುತ್ತದೆ. ಮುಖವನ್ನು ಮಾತ್ರ ಓಪನ್ ಬಿಟ್ಟು ಸೀಟಿನಲ್ಲಿ ಕೂರಿಸಲಾಗುತ್ತದೆ. ಡೆಸ್ಟಿನೇಷನ್ ಏರ್​ಪೋರ್ಟ್​ ಬರುವವರೆಗೂ ಪ್ರಯಾಣಿಕರು ಹೆಣದೊಂದಿಗೇ ಪ್ರಯಾಣವನ್ನ ಮಾಡಬೇಕಾಗುತ್ತದೆ. ಇದು ವಿಮಾನ ಪ್ರಯಾಣದ ರೂಲ್ಸ್..! ಯಾರೂ ಏನೂ ಮಾಡಕ್ಕಾಗಲ್ಲ.

ಇನ್ನು ವಿಮಾನ ಪ್ರಯಾಣದ ಸಮಯದಲ್ಲಿ ಪೈಲಟ್​ಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆಕಾಶವನ್ನೇ ನೋಡುತ್ತಿರುತ್ತಾರೆ ಅಂತಾ ನೀವು ಅಂದುಕೊಂಡರೆ ಅದು ನಿಮ್ಮ ಭ್ರಮೆ. ಅದೇನು ನಿಮ್ಮ ಬೆಂಗಳೂರಿನ ರಸ್ತೆಯಲ್ಲ ಯಾವಾಗಲೂ ನೋಡ್ತಾ ಇರೋಕೆ. ಲಾಂಗ್ ಜರ್ನಿ ಫ್ಲೈಟ್​ಗಳಲ್ಲಿ ವಿಮಾನ ಹೆಚ್ಚಿನ ಸಂದರ್ಭಗಳಲ್ಲಿ ಆಟೋ ಪೈಲೆಟ್ ಮೋಡ್​​ನಲ್ಲಿ ಇರುತ್ತೆ. ವಿಶ್ವದ ಟಾಪ್ 500 ಪೈಲೆಟ್​ಗಳನ್ನ ಸರ್ವೆ ಮಾಡಿದಾಗ 43 ಪರ್ಸೆಂಟ್ ಪೈಲಟ್​ಗಳು ನಾವು ವಿಮಾನ ಹಾರಾಟದ ಸಂದರ್ಭದಲ್ಲಿ ಸಣ್ಣ ನಿದ್ದೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇನ್ನು 31 ಪರ್ಸೆಂಟ್ ಪೈಲೆಟ್​ಗಳು ಹಲವು ಬಾರಿ ಗೊತ್ತಿಲ್ಲದಂತೆ ತಾವು ನಿದ್ದೆಗೆ ಜಾರಿದ್ದಾಗಿ ಒಪ್ಪಿಕೊಂಡಿದ್ದಾರೆ. ಎಷ್ಟೋ ಸಲ ಇವರು ನಿದ್ದೆಯಿಂದ ಎದ್ದಾಗ ಕೋ ಪೈಲಟ್​ಗಳು ಕೂಡ ನಿದ್ದೆಗೆ ಜಾರಿದ್ದರಂತೆ. ಈಗ ನಿಮ್ಮ ಹಾರ್ಟ್ ಬೀಟ್ ಜಾಸ್ತಿಯಾಗಿರುತ್ತೆ ಅಂತ ನಮಗೆ ಗೊತ್ತು ಬಿಡಿ!

ಇನ್ನು ನೀವು ಬ್ಲಾಕ್ ಬಾಕ್ಸ್ ಅನ್ನೋ ಶಬ್ದವನ್ನ ಆಗಾಗ ಕೇಳಿರುತ್ತೀರಿ. ಪ್ರತಿಬಾರಿ ವಿಮಾನ ಅಪಘಾತಕ್ಕೀಡಾದಾಗ ಬ್ಲಾಕ್ ಬಾಕ್ಸ್​ಗಾಗಿ ಹುಡುಕಾಟ ನಡೆಸಲಾಗುತ್ತದೆ. ಬ್ಲಾಕ್​ ಬಾಕ್ಸ್ ಅಂದ್ರೆ ವಿಮಾನದ ಡೇಟಾ ರೆಕಾರ್ಡರ್. ಆದರೆ ಇದು ಹೆಸರಿನ ಹಾಗೆ ಬ್ಲಾಕ್ ಇರೋದಿಲ್ಲ. ಬ್ರೈಟ್ ಆರೆಂಜ್ ಬಣ್ಣದಲ್ಲಿರುತ್ತದೆ. ಬ್ರೈಟ್ ಆರೆಂಜ್ ಬಣ್ಣ ಹೀಟ್ ರೆಸಿಸ್ಟೆನ್ಸ್ ಶಕ್ತಿಯನ್ನ ಹೊಂದಿರುತ್ತದೆ ಮತ್ತು ಈ ಕಲರ್ ಹುಡುಕಲು ಈಸಿ ಅನ್ನೋ ಕಾರಣಕ್ಕಾಗಿ ಬ್ಲಾಕ್ ಬಾಕ್ಸ್​ನ ಬಣ್ಣ ಬ್ರೈಟ್ ಆರೆಂಜ್ ಇರುತ್ತೆ.

ಇನ್ನು ವಿಮಾನದ ಒಳಗೆ ಉಸಿರಾಡುವ ಗಾಳಿ ತುಂಬಾ ಡ್ರೈ ಇರುತ್ತೆ. ಹ್ಯುಮಿಡಿಟಿ ಲೆವೆಲ್ ತುಂಬಾ ಕಮ್ಮಿ ಇರುತ್ತೆ.

ಇನ್ನು ಮೈಲೇಜ್​ಗೂ ಪ್ರತಿ ಭಾರತೀಯರಿಗೂ ಒಂಥರಾ ನಂಟು. ಸೋ ವಿಮಾನದ ಮೈಲೇಜ್ ಎಷ್ಟು ಅಂತ ನೀವು ಕೇಳಿದ್ರೆ ಅದಕ್ಕೆ ಉತ್ತರ ಹೇಳುತ್ತೇವೆ ಕೇಳಿ. ದೊಡ್ಡ ವಿಮಾನ ನಿಮ್ಮ ಕಾರಿಗಿಂತಲೂ ಹೆಚ್ಚು ಮೈಲೇಜ್ ಕೊಡುತ್ತದೆ. ಒಂದು ಬೋಯಿಂಗ್ 704 ವಿಮಾನ ಪ್ರತಿ ಸೆಕೆಂಡಿಗೆ ಒಂದು ಗ್ಯಾಲನ್ ಇಂಧನವನ್ನ ಸುಡುತ್ತದೆ. ಅಂದ್ರೆ ಪ್ರತಿ ಮೈಲಿಗೆ 5 ಗ್ಯಾಲನ್ ಅಂತ ಆಯ್ತು. ಆದರೆ ಕಾರು ಒಂದು ಗ್ಯಾಲನ್​ಗೆ 25 ಮೈಲು ಮೈಲೇಜ್ ಕೊಡುತ್ತದೆ. ಆದರೆ ಇಲ್ಲಿ ಒಂದು ಪಾಯಿಂಟ್ ಇದೆ. ನಿಮ್ಮ ಕಾರಿನಲ್ಲಿ ಓಡಾಡಲು ನಾಲ್ಕೈದು ಜನಕ್ಕೆ ಮಾತ್ರ ಆಗುತ್ತೆ. ಆದರೆ ಒಂದು ಬೋಯಿಂಗ್ 704 ವಿಮಾನದಲ್ಲಿ 500ಕ್ಕೂ ಅಧಿಕ ಜನ ಪ್ರಯಾಣ ಮಾಡಬಹುದು. ಸೋ ಈಗ ಪ್ರತಿ ವ್ಯಕ್ತಿ ಆಧಾರದ ಮೇಲೆ ಮೈಲೇಜ್ ಲೆಕ್ಕ ಹಾಕಿದರೆ ಕಾರಿಗಿಂತಲೂ ವಿಮಾನದ ಮೈಲೇಜ್ ಜಾಸ್ತಿ ಆಗುತ್ತದೆ.

ಇನ್ನು ವಿಮಾನ ಅಪಹರಣದ ಒಂದು ಕಥೆಯಂತೂ ಭಯಂಕರ ವಿಚಿತ್ರವಾಗಿದೆ. ಒಬ್ಬ ಸಿಂಗಲ್ ಪ್ರಯಾಣಿಕ ಬರೀ ಒಂದು ಪಿಸ್ತೂಲ್ ಬಳಸಿ Norweian Flight ಒಂದನ್ನ ಹೈಜಾಕ್ ಮಾಡಿದ್ದ. ಈತ ಹೈಜಾಕ್ ಯಾಕೆ ಮಾಡಿದ ಅಂತ ಗೊತ್ತಾದ್ರೆ ನೀವು ಬೆಚ್ಚಿ ಬೀಳುತ್ತೀರಿ! ಕೇವಲ ಒಂದು ಬಿಯರ್ ಬಾಟ್ಲಿ ಕೊಡಿ ಅಂತಾ ಗಲಾಟೆ ಮಾಡಿ ವಿಮಾನವನ್ನೇ ಹೈಜಾಕ್ ಮಾಡಿದ್ದ ಈ ಭೂಪ. ಆದರೆ ಮುಂದಿನ ವಿಮಾನ ನಿಲ್ದಾಣ ಬಂದಾಗ ಪೊಲೀಸರು ಹಿಡ್ಕೊಂಡು ಹೋಗಿ ಇವನನ್ನ ಗುಮ್ಮಿದ್ರು. ಅದು ಬೇರೆ ವಿಚಾರ.

ಇನ್ನು ವಿಮಾನದ ನೀರಿನಲ್ಲಿ ವಿವಿಧ ರೀತಿಯ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. Salmonella, Stefello Coctus ನಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಲಾಂಗ್ ಜರ್ನಿ ಇಂಟರ್​ನ್ಯಾಷನಲ್​ ಫ್ಲೈಟ್​ಗಳಲ್ಲಿನ ಕುಡಿಯೋ ನೀರಿನ ಬಾಟಲ್​ಗಳಲ್ಲಿ ಈ ರೀತಿ ಹೆಚ್ಚಿನ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ‌.

ಇನ್ನು ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನ ಏರ್ ಬಸ್​ನ Airbus A380… ಇದೊಂದು ಡಬಲ್ ಡೆಕ್ಕರ್ ವಿಮಾನವಾಗಿದ್ದು, ಇದರ ಗರಿಷ್ಠ ಸ್ಪೀಡ್ 1020 ಕಿಲೋಮೀಟರ್ ಪ್ರತಿ ಗಂಟೆ.

ಇನ್ನು ಇತಿಹಾಸದ ಅತಿ ದೊಡ್ಡ ವಿಮಾನ ಅಪಘಾತ ಅಂದರೆ 1977ರ ಭೀಕರ ಅಪಘಾತ. ಆಕಾಶದಲ್ಲಿ ಎರಡು ವಿಮಾನಗಳು ಮುಖಾಮುಖಿ ಡಿಕ್ಕಿಯಾಗಿದ್ದ ಈ ಅಪಘಾತದಲ್ಲಿ 500ಕ್ಕೂ ಅಧಿಕ ಜನ ಪ್ರಾಣವನ್ನ ಕಳೆದುಕೊಂಡಿದ್ದರು.

ವಿಮಾನ ಹಾರಾಟದ ಇನ್ನೊಂದು ರೋಚಕ ಅಂಶ ಅಂದ್ರೆ ಪೈಲಟ್ ಮತ್ತು ಕೋ ಪೈಲಟ್​ಗೆ ಬೇರೆಬೇರೆ ಆಹಾರವನ್ನ ಕೊಡಲಾಗುತ್ತದೆ. ಯಾಕಂದ್ರೆ ಒಂದು ವೇಳೆ ಆಹಾರದಲ್ಲಿ ದೋಷ ಇದ್ದು ಒಬ್ಬ ಪೈಲಟ್ ಅಸ್ವಸ್ಥನಾದ್ರೆ ಇನ್ನೊಬ್ಬ ಪೈಲಟ್ ರೆಡಿ ಇರಬೇಕು ಅನ್ನೋ ಕಾರಣಕ್ಕೆ. ಸಖತ್ ಇಂಟರೆಸ್ಟಿಂಗ್ ಅಲ್ವಾ..?!

ಇನ್ನು ಪೈಲಟ್​ಗಳಿಗೆ ನಮ್ಮ, ನಿಮ್ಮ ರೀತಿ ತಿಂಗಳು ಅಥವಾ ವರ್ಷದ ಲೆಕ್ಕದಲ್ಲಿ ಸಂಬಳ ಕೊಡುವುದಿಲ್ಲ. ಅವರ ಸಂಬಳ ಗಂಟೆಯ ಲೆಕ್ಕದಲ್ಲಿ ಇರುತ್ತದೆ. ಅವರು ವಿಮಾನ ಹಾರಿಸುವ ಗಂಟೆಗಳ ಲೆಕ್ಕದಲ್ಲಿ ಸ್ಯಾಲರಿ ಫಿಕ್ಸ್ ಮಾಡಲಾಗುತ್ತದೆ.

ಇನ್ನು ಬ್ರಿಟಿಷ್ ಮತ್ತು ಫ್ರೆಂಚರು ಸೇರಿ ಒಟ್ಟಾಗಿ ಅಭಿವೃದ್ಧಿಪಡಿಸಿದ ಕಾಂಕಾರ್ಡ್ ವಿಮಾನ ವಿಶ್ವದ ಅತಿ ವೇಗದ ಪ್ರಯಾಣಿಕ ವಿಮಾನವಾಗಿದೆ. ಇದರ ವೇಗ ಗಂಟೆಗೆ 2000 ಕಿಲೋಮೀಟರ್​ಗೂ ಹೆಚ್ಚು.

ಇನ್ನು ಪ್ರತಿದಿನ ವಿಶ್ವದ ಆಕಾಶದ ಮೇಲೆ ಎರಡು ಲಕ್ಷಕ್ಕೂ ಅಧಿಕ ವಿಮಾನಗಳು ಹಾರಾಡುತ್ತವೆ ಅಂದ್ರೆ ನೀವು ನಂಬಲೇಬೇಕು. ಇಷ್ಟೊಂದು ವಿಮಾನಗಳು ಹಾರಾಡಿದರೆ ಏನು!? ಪ್ರಪಂಚದ ಪ್ರತಿ ಐದು ವ್ಯಕ್ತಿಗಳಲ್ಲಿ ಒಬ್ಬರಿಗೆ ವಿಮಾನ ಹಾರಾಟದ ಬಗ್ಗೆ ವಿಪರೀತ ಭಯ ಇದೆ. ವಿಶ್ವದ 80 ಪರ್ಸೆಂಟ್​ನಷ್ಟು ಜನ ಇನ್ನೂ ವಿಮಾನದ ಒಳಗೆ ಕಾಲಿಟ್ಟೇ ಇಲ್ಲ.

ಇನ್ನು ಭಾರತದ ಮೊದಲ ಏರ್​ಪೋರ್ಟ್ ಅಂದ್ರೆ ಅದು ಜುಹು ಏರೋಡ್ರೋಮ್. ಇದನ್ನ 1928ರಲ್ಲಿ ಶುರು ಮಾಡಲಾಯಿತು.

ಇನ್ನು ವಿಮಾನದ ಒಳಗೆ ಟಾಯ್ಲೆಟ್​ಗೆ ಹೋದರೆ ಅದು ಕೆಳಗೆ ಬೀಳುತ್ತದೆ ಅಂತ ತುಂಬಾ ಜನ ಅಂದುಕೊಂಡಿದ್ದಾರೆ. ಆದರೆ ನಿಮ್ಮ ಮಾಹಿತಿಗೆ ಇರಲಿ. ವಿಮಾನದ ಶೌಚಾಲಯಕ್ಕೆ 200 ಗ್ಯಾಲನ್ ಸಾಮರ್ಥ್ಯದ ಟ್ಯಾಂಕ್ ಅನ್ನ ಫಿಕ್ಸ್ ಮಾಡಿರುತ್ತಾರೆ.

ಇನ್ನು ವಿಮಾನದ ಟೈರ್ ಪ್ರೆಶರ್ 200 ಪಿಎಸ್ಐ ಇರುತ್ತದೆ. ಗಂಟೆಗೆ 250 ಕಿಲೋಮೀಟರ್​ಗೂ ಹೆಚ್ಚು ವೇಗದಲ್ಲಿ ಬಂದು ವಿಮಾನ ಲ್ಯಾಂಡ್ ಆದರೂ ಈ ಟೈರ್​ಗಳಿಗೆ ಏನೂ ಆಗುವುದಿಲ್ಲ.

ಇನ್ನು ಬಹುತೇಕ ಎಲ್ಲಾ ನಾಗರಿಕ ವಿಮಾನಗಳ ಬಣ್ಣ ವೈಟ್ ಇರುತ್ತದೆ. ಯಾಕಂದ್ರೆ ಬಿಳಿ ಬಣ್ಣಕ್ಕೆ ಸೂರ್ಯನ ಶಾಖವನ್ನ ತಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಿರುತ್ತದೆ. ಹೀಗಾಗಿ ವಿಮಾನದ ಒಳಗೆ ತಣ್ಣಗಿನ ವಾತಾವರಣವನ್ನ ಉಂಟು ಮಾಡಲು ಸಾಧ್ಯವಾಗುತ್ತದೆ ಅನ್ನೋ ಕಾರಣಕ್ಕೆ ಹೆಚ್ಚಿನ ವಿಮಾನಗಳು ವೈಟ್ ಕಲರ್ ಇರುತ್ತವೆ.

ಇನ್ನು ಜಗತ್ತಿನ ಮೊದಲ ಪೈಲಟ್ Wiley Hardeman Post. ಅದೇ ರೀತಿ ಭಾರತದ ಮೊದಲ ಪೈಲಟ್ ಟಾಟಾ ಫೌಂಡೇಶನ್ನ ಜೆಆರ್​ಡಿ ಟಾಟಾ ಅವ್ರ ತಂದೆ Ratan Ji Dadhobhai Tata.

ಇನ್ನು ಅಮೆರಿಕದ ನಾಸಾದ ನೀಲ್ ಆರ್ಮ್​​ಸ್ಟ್ರಾಂಗ್ ಮತ್ತು ತಂಡ ಮೊದಲ ಬಾರಿ ಮೂನ್ ಲ್ಯಾಂಡಿಂಗ್ ಮಾಡಿದಾಗ ರೈಟ್ ಬ್ರದರ್ಸ್ ಕಂಡುಹಿಡಿದಿದ್ದ ಜಗತ್ತಿನ ಮೊದಲ ವಿಮಾನದ ತುಂಡೊಂದನ್ನ ತಮ್ಮೊಂದಿಗೆ ಚಂದ್ರನ ಮೇಲೆ ತೆಗೆದುಕೊಂಡು ಹೋಗಿದ್ದರು.

ಫ್ರೆಂಡ್ಸ್ ಇದಾಗಿತ್ತು ವಿಮಾನ ಮತ್ತು ವಿಮಾನ ಪ್ರಯಾಣಕ್ಕೆ ಸಂಬಂಧಪಟ್ಟಂತಹ ಒಂದಷ್ಟು ರೋಚಕ ಸಂಗತಿಗಳು. ನಿಮಗಿದು ಇಷ್ಟ ಆಗಿದ್ದರೆ ಲೈಕ್ ಮಾಡಿ ಎಲ್ಲರಿಗೂ ಶೇರ್ ಮಾಡಿ.

Contact Us for Advertisement

Leave a Reply