masthmagaa.com:

ಸಾಕಷ್ಟು ಭರವಸೆ ಮೂಡಿಸಿರುವ ಆಕ್ಸ್​ಫರ್ಡ್​ ಲಸಿಕೆಯ ಕೊನೆಯ ಹಂತದ ಮಾನವ ಪ್ರಯೋಗವನ್ನು ಭಾರತದಲ್ಲಿ ಮುಂದುವರಿಸಲು ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI) ಗ್ರೀನ್ ಸಿಗ್ನಲ್ ಕೊಟ್ಟಿದೆ. ಬ್ರಿಟನ್​ನಲ್ಲಿ ಈ ಲಸಿಕೆಯ ಮಾನವ ಪ್ರಯೋಗದ ವೇಳೆ ಸ್ವಯಂಸೇವಕರಲ್ಲಿ ಗಂಭೀರ ಸ್ವರೂಪದ ಅಡ್ಡ ಪರಿಣಾಮ ಕಾಣಿಸಿಕೊಂಡಿತ್ತು. ಹೀಗಾಗಿ ಅದರ ಮಾನವ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಇತ್ತೀಚೆಗೆ ಬ್ರಿಟನ್​ ಸೇರಿದಂತೆ ಬ್ರೆಜಿಲ್, ದಕ್ಷಿಣ ಆಫ್ರಿಕಾದಲ್ಲಿ ಮಾನವ ಪ್ರಯೋಗ ಪುನಾರಂಭವಾಗಿತ್ತು, ಆದ್ರೆ ಅಮೆರಿಕದಲ್ಲಿ ಇನ್ನೂ ಸ್ಥಗಿತಗೊಂಡೇ ಇದೆ. ಇದೀಗ ಭಾರತದಲ್ಲಿ ಅದಕ್ಕೆ ಅನುಮತಿ ಸಿಕ್ಕಿದೆ. ಆದ್ರೆ ಲಸಿಕೆ ಸುರಕ್ಷತೆ ಬಗ್ಗೆ ಹೆಚ್ಚಿನ ಮೇಲ್ವಿಚಾರಣೆ ಮಾಡಬೇಕು, ಇತ್ತೀಚೆಗೆ ಕಾಣಿಸಿಕೊಂಡ ಸೈಡ್​ ಎಫೆಕ್ಟ್ ಬಗ್ಗೆ ಸ್ವಯಂಸೇವಕರಿಗೆ ತಿಳಿಸಬೇಕು ಅನ್ನೋದು ಸೇರಿದಂತೆ ಕೆಲವೊಂದು ಷರತ್ತುಗಳನ್ನ ವಿಧಿಸಲಾಗಿದೆ.

ಅಂದ್ಹಾಗೆ ಆಕ್ಸ್​ಫರ್ಡ್​ ಮತ್ತು ಆಸ್ಟ್ರಾಝೆನಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯ ಮಾನವ ಪ್ರಯೋಗ ಮತ್ತು ಉತ್ಪಾದನೆಯನ್ನು ಭಾರತದಲ್ಲಿ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ  ನೋಡಿಕೊಳ್ಳುತ್ತದೆ. ಪುಣೆ ಮೂಲದ ಈ ಕಂಪನಿ ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆಯಾಗಿದೆ.

-masthmagaa.com

Contact Us for Advertisement

Leave a Reply