masthmagaa.com:

ಭಾರತದಲ್ಲಿ ಆಕ್ಸ್​ಫರ್ಡ್​ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಕಂಪನಿ ಸೇರಿಕೊಂಡು ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್​’ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಅನುಮತಿ ಕೋರಿದೆ. ಈ ಸಂಬಂಧ ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶನಾಲಯಕ್ಕೆ (DCGI) ಅರ್ಜಿ ಸಲ್ಲಿಸಿದೆ. ಭಾರತದಲ್ಲಿ ಕೊರೋನಾ ಲಸಿಕೆಯ ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ 2ನೇ ಕಂಪನಿ ಇದಾಗಿದೆ. ನಿನ್ನೆಯಷ್ಟೇ ಅಮೆರಿಕದ ಫೈಝರ್ (Pfizer) ಮತ್ತು ಬಿಯೋನ್​ಟೆಕ್ (BIONTECH)​ ಕಂಪನಿ ತಾನು ಅಭಿವೃದ್ಧಿಪಡಿಸಿರುವ ಲಸಿಕೆಗೆ ಅನುಮತಿ ಕೋರಿ DCGIಗೆ ಪತ್ರ ಬರೆದಿತ್ತು.

ಭಾರತದಲ್ಲಿ ಆಕ್ಸ್​ಫರ್ಡ್​ ಲಸಿಕೆಯ 3ನೇ ಮತ್ತು ಕೊನೇ ಹಂತದ ಮಾನವ ಪ್ರಯೋಗ ನಡೆಯುತ್ತಿದೆ. ಇದರ ಜವಾಬ್ದಾರಿಯನ್ನ ಸೀರಂ ಇನ್​ಸ್ಟಿಟ್​ ಆಫ್ ಇಂಡಿಯಾ ವಹಿಸಿಕೊಂಡಿದೆ. ಮತ್ತೊಂದುಕಡೆ ಫೈಝರ್ ಲಸಿಕೆಯ ಮಾನವ ಪ್ರಯೋಗ ಭಾರತದಲ್ಲಿ ನಡೆದಿಲ್ಲ. ಅಲ್ಲದೆ ಫೈಝರ್ ಲಸಿಕೆಯ ನಿರ್ವಹಣೆ ಕೂಡ ಕಷ್ಟ. ಹೀಗಾಗಿ ಆಕ್ಸ್​ಫರ್ಡ್​ ಲಸಿಕೆ ಮೇಲೆ ಭಾರತ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಸೋ ಮೊದಲು ಯಾವ ಲಸಿಕೆಗೆ ಅನುಮತಿ ಸಿಗುತ್ತೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಅನುಮತಿ ಸಿಗುತ್ತಿದ್ದಂತೇ ದೇಶದಲ್ಲಿ ಕೊರೋನಾ ಲಸಿಕೆಯ ಅಭಿಯಾನ ಕೂಡ ಆರಂಭವಾಗಲಿದೆ.

ಆಕ್ಸ್​ಫರ್ಡ್​ ಲಸಿಕೆಯ ಅರ್ಧ ಡೋಸ್‌ 90% ಪರಿಣಾಮಕಾರಿಯಾದ್ರೆ, ಪೂರ್ತಿ ಡೋಸ್‌ 62% ಪರಿಣಾಮಕಾರಿ ಅಂತ ಇತ್ತೀಚೆಗೆ ಕಂಪನಿ ಘೋಷಿಸಿಕೊಂಡಿತ್ತು. ಎರಡನ್ನೂ ಸೇರಿಸಿ ತಮ್ಮ ಲಸಿಕೆ 70.4% ಪರಿಣಾಮಕಾರಿ ಅಂತ ಹೇಳಿತ್ತು.

-masthmagaa.com

Contact Us for Advertisement

Leave a Reply