masthmagaa.com:

ಆಕ್ಸ್​ಫರ್ಡ್​ ಲಸಿಕೆ ಪಡೆದ ಸ್ವಯಂಸೇವಕರಲ್ಲಿ ಸೈಡ್ ಎಫೆಕ್ಟ್ ಕಾಣಿಸಿಕೊಂಡ ಹಿನ್ನೆಲೆ ಯಾವ ಯಾವ ದೇಶದಲ್ಲಿ ಅದರ ಪ್ರಯೋಗ ನಡೆಯುತ್ತಿತ್ತೋ ಅದನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅಂತ ಅಸ್ಟ್ರಾಝೆನೆಕಾ ಕಂಪನಿ ಹೇಳಿತ್ತು. ಆದ್ರೆ ಭಾರತದಲ್ಲಿ ಏನೂ ಪ್ರಾಬ್ಲಂ ಇಲ್ಲ, ಇಲ್ಲಿ ಅದರ ಪ್ರಯೋಗ ಮುಂದುವರಿಸ್ತೀವಿ ಅಂತ ಸೀರಂ ಇನ್​ಸ್ಟಿಟ್ಯೂಟ್​ನ ಸಿಇಒ ಅಡರ್ ಪೂನಾವಲಾ ಹೇಳಿಕೆ ನೀಡಿದ್ದರು.

ಇದಕ್ಕೆ ಸಂಬಂಧಿಸಿದಂತೆ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಗೆ ನೋಟಿಸ್ ನೀಡಿರುವ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (DCGI), ಲಸಿಕೆಯಲ್ಲಿ ಸಮಸ್ಯೆ ಕಂಡು ಬಂದರೂ ಇನ್ನೂ ಯಾಕೆ ಅದರ ಪ್ರಯೋಗವನ್ನು ನಿಲ್ಲಿಸಿಲ್ಲ. ಸೈಡ್ ಎಫೆಕ್ಟ್ ಕಾಣಿಸಿಕೊಂಡ ಬಗ್ಗೆ ನಮಗ್ಯಾಕೆ ಮಾಹಿತಿ ಕೊಟ್ಟಿಲ್ಲ ಅಂತ ವಿವರಣೆ ಕೇಳಿದೆ.

ಇದರ ಬೆನ್ನಲ್ಲೇ ಭಾರತದಲ್ಲೂ ಆಕ್ಸ್​ಫರ್ಡ್​ ಲಸಿಕೆಯ ಮಾನವ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ಸೀರಂ ಇನ್​ಸ್ಟಿಟ್ಯೂಟ್​ ಹೇಳಿದೆ. ಜೊತೆಗೆ ಆಸ್ಟ್ರಾಝೆನೆಕಾ ಕಂಪನಿಯು ಲಸಿಕೆಯ ಮಾನವ ಪ್ರಯೋಗವನ್ನು ಪುನಾರಂಭಿಸುವವರೆಗೆ ನಾವು ಕೂಡ ಅದರ ಪ್ರಯೋಗ ನಡೆಸಲ್ಲ ಅಂತ ತಿಳಿಸಿದೆ. ಈ ಮೂಲಕ ಭಾರಿ ಭರವಸೆ ಮೂಡಿಸಿದ್ದ ಆಕ್ಸ್​ಫರ್ಡ್​ ಲಸಿಕೆ ಮತ್ತಷ್ಟು ದೂರವಾದಂತೆ ಕಾಣ್ತಿದೆ.

-masthmagaa.com

Contact Us for Advertisement

Leave a Reply