ಕೋವಿಶೀಲ್ಡ್​ ಲಸಿಕೆಗೆ ದರ ನಿಗದಿ: ಬೇರೆ ದೇಶಗಳಿಗಿಂತ ಭಾರತದಲ್ಲಿ ಕಮ್ಮಿ ಬೆಲೆ

masthmagaa.com:

ದೇಶದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ಓಪನ್ ಅಪ್ ಆಗ್ತಿದೆ. ಇದರ ನಡುವೆಯೇ ಕೇಂದ್ರ ಸರ್ಕಾರ ದೇಶದಲ್ಲಿ ಉತ್ಪಾದನೆಯಾಗುವ ಅರ್ಧದಷ್ಟು ಲಸಿಕೆ ತನಗೆ ಸಿಗಬೇಕು ಉಳಿದ ಅರ್ಧದಷ್ಟು ಲಸಿಕೆಯನ್ನ ರಾಜ್ಯ ಸರ್ಕಾರಗಳು ಖರೀದಿಸಬಹುದು, ಅಥವಾ ಓಪನ್ ಮಾರ್ಕೆಟ್​ಗೆ ಬಿಡಬಹುದು ಅಂತ ಹೇಳಿತ್ತು. ಇದೀಗ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್​ ಲಸಿಕೆಯ ರೇಟನ್ನ ಘೋಷಿಸಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ರೇಟ್​ ಫಿಕ್ಸ್ ಮಾಡಿದ್ದೀವಿ ಅಂತ ಹೇಳಿದೆ. ಇದರ ಪ್ರಕಾರ ರಾಜ್ಯ ಸರ್ಕಾರಗಳಿಗಾದ್ರೆ ಕೋವಿಶೀಲ್ಡ್​ನ 1 ಡೋಸ್​ಗೆ 400 ರೂಪಾಯಿ ಮತ್ತು ಖಾಸಗಿ ಮಾರುಕಟ್ಟೆಗಾದ್ರೆ ಪ್ರತಿ ಡೋಸ್​ಗೆ 600 ರೂಪಾಯಿ ಇದೆ. ಬೇರೆ ದೇಶಗಳಿಗೆ ಹೋಲಿಸಿದ್ರೆ ನಾವು ತುಂಬಾ ಕಮ್ಮಿ ಬೆಲೆಗೆ ಲಸಿಕೆಯನ್ನ ಕೊಡ್ತಿದ್ದೀವಿ ಅಂತ ಸೀರಂನ ಮುಖ್ಯಸ್ಥ ಅಡಾರ್ ಪೂನಾವಾಲಾ ಹೇಳಿದ್ದಾರೆ. ಅಮೆರಿಕದ ಲಸಿಕೆಗಳಿಗೆ ಖಾಸಗಿ ಮಾರುಕಟ್ಟೆಯಲ್ಲಿ ಒಂದೂವರೆ ಸಾವಿರ ರೂಪಾಯಿಗೂ ಹೆಚ್ಚಿದೆ. ರಷ್ಯಾ ಮತ್ತು ಚೀನಾದ ಲಸಿಕೆಗಳಿಗೆ 750 ರೂಪಾಯಿಗೂ ಹೆಚ್ಚಿದೆ ಅಂತ ಹೇಳಿದ್ದಾರೆ. ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರತಿ ತಿಂಗಳು 6ರಿಂದ 7 ಕೋಟಿಯಷ್ಟು ಲಸಿಕೆಯನ್ನ ಉತ್ಪಾದಿಸುತ್ತೆ. ಭಾರತ್ ಬಯೋಟೆಕ್ ಕಂಪನಿ 1 ಕೋಟಿಯಷ್ಟು ಲಸಿಕೆ ಉತ್ಪಾದನೆ ಮಾಡುತ್ತೆ.

-masthmagaa.com

Contact Us for Advertisement

Leave a Reply