ಸಿದ್ದು ಮುಗಿಸಲು ಕಾಂಗ್ರೆಸ್ ನಲ್ಲಿ ಭಯಾನಕ ರಣತಂತ್ರ..!

ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಒಳ ಬೇಗುದಿ ಸ್ಫೋಟಗೊಂಡಿದ್ದು ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದಾರೆ. ಇದು ಆಲ್ ಆಫ್ ಎ ಸಡನ್ ಆಗಿರುವ ಬೆಳವಣಿಗೆಯಲ್ಲ. ಇದರ ಹಿಂದೆ ಸಿದ್ದು ಮುಗಿಸುವ ಅತ್ಯಂತ ಪ್ರೀ ಪ್ಲಾನ್ಡ್ ಕುತಂತ್ರವಿದೆ. ಶಕುನಿಯ ದಾಳವಿದೆ. ಕತ್ತಲ ಮರೆಯಲ್ಲಿ ನಿಂತು ತಲೆ ಮೇಲೆ ಹೊಡೆಯುವ ರಾಜನೀತಿ ಇದೇ. ಈ ಎಲ್ಲವನ್ನ ಹೇಳ್ತಾ ಹೋಗ್ತೀವಿ ನೋಡಿ.

ಫ್ರೆಂಡ್ಸ್ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರ ಆಲ್ ಓಟ್ ಯುದ್ಧ ಸ್ಫೋಟಗೊಂಡಿದ್ದು ಅದೊಂದು ಸಭೆಯಲ್ಲಿ. ಹಾಗಾದ್ರೆ ಆ ಸಭೆಯಲ್ಲಿ ಏನಾಯಿತು ಅಂತ ಮೊದಲು ನೋಡೋಣ.

ಕಾಂಗ್ರೆಸ್ ಸಭೆಯಲ್ಲಿ ಕಿತ್ತಾಡಿದ್ದ ಸಿದ್ದು-ಮುನಿ
ಫ್ರೆಂಡ್ಸ್ ಉಪಚುನಾವಣೆಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಮೊನ್ನೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಕರೆಯಲಾಗಿತ್ತು. ಆದ್ರೆ ಸಭೆಯು ಅಭ್ಯರ್ಥಿಗಳ ಆಯ್ಕೆಗಿಂತ ಕೈ ನಾಯಕರ ಜಟಾಪಟಿಗೆ ಸಾಕ್ಷಿಯಾಗಿತ್ತು. ಯಾಕಂದ್ರೆ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ಮುನಿಸಿಕೊಂಡ ಕೆ ಹೆಚ್ ಮುನಿಯಪ್ಪ ಹಾಗೂ ಬಿ.ಕೆ ಹರಿಪ್ರಸಾದ್, ಅವರನ್ನ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಕೋಲಾರದಲ್ಲಿ ತಮ್ಮ ಸೋಲಿಗೆ ರಮೇಶ್ ಕುಮಾರ್ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರನ್ನ ಜೊತೆಯಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದಿರಲ್ಲ ಅಂತ ಸಿದ್ದರಾಮಯ್ಯ ವಿರುದ್ಧ ಮುನಿಯಪ್ಪ ಬೆಂಕಿ ಉಗುಳಿದ್ರು. ಕೊನೆಗೆ ಸಿದ್ದರಾಮಯ್ಯ ಹಾಗೂ ಕೆ.ಎಚ್. ಮುನಿಯಪ್ಪ ಪರಸ್ಪರ ಏಕವಚನದಲ್ಲೆ ಬೈದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮುನಿ ಹಿಂದಿದೆ ಮೂಲ ಕಾಂಗ್ರೆಸ್ಸಿಗರ ದಂಡು
ಫ್ರೆಂಡ್ಸ್ ಕೆಪಿಸಿಸಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆ ಹೆಚ್ ಮುನಿಯಪ್ಪ ರೇಗಾಡಲು ಸಾಕಷ್ಟು ಕಾರಣಗಳಿವೆ. ಲೋಕಸಭೆ ಚುನಾವಣೆ ಸೋಲಿನ ಹತಾಶೆಯಲ್ಲಿರುವ ಮುನಿಯಪ್ಪ ಹೀಗೆ ಹರಿಹಾಯ್ದರು ಅಂತ ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ ಮುನಿಯಪ್ಪ ಹಿಂದೆ ಮೂಲ ಕಾಂಗ್ರೆಸ್ಸಿಗರ ದೊಡ್ಡ ದಂಡೇ ಇದೆ. ಅವರೆಲ್ಲರ ಪರವಾಗಿ ಸಿದ್ದರಾಮಯ್ಯಗೆ ಮುನಿಯಪ್ಪ ಸಖತ್ತಾಗೆ ಚಳಿಜ್ವರ ಬಿಡಿಸಿದ್ದಾರೆ ಎನ್ನಲಾಗಿದೆ.

ಮುನಿಯಪ್ಪಗೆ ಪರಮೇಶ್ವರ್, ಖರ್ಗೆ ಬೆಂಬಲ
ಫ್ರೆಂಡ್ಸ್ ಮಾಜಿ ಡಿಸಿಎಂ ಡಾಕ್ಟರ್ ಜಿ ಪರಮೇಶ್ವರ್ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದಾರೆ. ಅಲ್ಲದೆ ಪಕ್ಷದ ಸಭೆಗಳಿಂದಲೂ ದೂರ ಉಳಿಯುತ್ತಿದ್ದಾರೆ. ಅತ್ತ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದೀಗ ಕೆ ಹೆಚ್ ಮುನಿಯಪ್ಪ, ಡಾಕ್ಟರ್ ಬಿ ಕೆ ಹರಿಪ್ರಸಾದ್.. ಹೀಗೆ ಹಲವು ಮೂಲ ಕಾಂಗ್ರೆಸ್ಸಿಗರು ಪಕ್ಷದಲ್ಲಿನ ಬೆಳವಣಿಗೆ ಹಾಗೂ ಸಿದ್ದರಾಮಯ್ಯ ನಡೆಯಿಂದ ಸಿಟ್ಟಾಗಿದ್ದಾರೆ. ಪಕ್ಷವನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರೋದು. ದಿನೇಶ್ ಗುಂಡೂರಾವ್ ಸಿದ್ದು ಹಾಕಿದ ತಾಳಕ್ಕೆ ಕುಣಿಯುತ್ತಿರೋದು ಪಕ್ಷದ ಮೂಲನಿವಾಸಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಇಬ್ಬರಿಗೂ ಪಾಠ ಕಲಿಸಬೇಕು ಅಂತ ಮೂಲ ಕಾಂಗ್ರೆಸ್ಸಿಗರು ಮೊದಲ ಹೆಜ್ಜೆ ಇಟ್ಟಿದ್ದಾರೆ.

ದೆಹಲಿಯಲ್ಲಿಯೇ ರೆಡಿಯಾಗಿತ್ತು ಸ್ಕೆಚ್
ಹೌದು ಫ್ರೆಂಡ್ಸ್, ಕೆಪಿಸಿಸಿ ಸಭೆಯಲ್ಲಿಸಿದ್ದರಾಮಯ್ಯ ವಿರುದ್ಧ ಕೆ ಹೆಚ್ ಮುನಿಯಪ್ಪ ತಿರುಗಿಬಿದ್ದಿದ್ದು ಮೊದಲೇ ನಿರ್ಧಾರವಾಗಿತ್ತು. ಅಂದಾಗೆ ಇತ್ತೀಚೆಗಷ್ಟೇ ಡಾಕ್ಟರ್ ಜಿ ಪರಮೇಶ್ವರ್ ದೆಹಲಿಗೆ ಹೋಗಿದ್ರು. ಆಗ ಇದೇ ಕೆ ಹೆಚ್ ಮುನಿಯಪ್ಪ, ಇದೆ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವರ ಜೊತೆ ಪರಂ ಸಭೆ ನಡೆಸಿದ್ರು. ಆಗ್ಲೇ ಟಗರಿನ ಪೊಗರು ಇಳಿಸುವ ಬಗ್ಗೆಯೇ ಚರ್ಚೆ ಆಗಿತ್ತು ಎನ್ನಲಾಗಿದೆ. ಅಲ್ಲದೆ ಸೋನಿಯಾ ಗಾಂಧಿಯನ್ನ ಭೇಟಿಯಾಗಿದ್ದ ಪರಮೇಶ್ವರ್ ಈ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದರು. ಮಲ್ಲಿಕಾರ್ಜುನ ಖರ್ಗೆ ಎಲ್ಲೂ ಕಾಣಿಸಿಕೊಳ್ಳದಿದ್ದರೂ ಪರೋಕ್ಷವಾಗಿ ಇವರೆಲ್ಲರಿಗೂ ಸಪೋರ್ಟ್ ಮಾಡಿದ್ರು. ಅದರಂತೆಯೇ ಚುನಾವಣಾ ಸಮಿತಿ ಸಭೆಯಲ್ಲಿ ಮುನಿಯಪ್ಪ ಮೂಲಕ ಆಕ್ರೋಶ ಹೊರಹಾಕಿಸಲಾಯಿತು. ಈ ಬಗ್ಗೆ ಮೊದಲೇ ಸುಳಿವು ಪಡೆದಿದ್ದ ಕೆಸಿ ವೇಣುಗೋಪಾಲ್ ಸಭೆಯಲ್ಲಿ ಸುಮ್ಮನೆ ಕೂತಿದ್ರು. ಗಾಳಿ ಯಾವ ಕಡೆ ಬೀಸುತ್ತಿದೆ ಅನ್ನೋದನ್ನ ಅರ್ಥ ಮಾಡಿಕೊಂಡಿದ್ದ ಸಿದ್ದು ಶಿಷ್ಯರು ಕೂಡ ತುಟಿ ಬಿಚ್ಚಲಿಲ್ಲ ಎನ್ನಲಾಗಿದೆ.

ಸಿದ್ದುಗೆ ವಿಪಕ್ಷ ಸ್ಥಾನದ ಕುರ್ಚಿಯೂ ಮಿಸ್
ಹೌದು ಫ್ರೆಂಡ್ಸ್ ಎಲ್ಲಾ ಬೆಳವಣಿಗೆಗಳನ್ನು ನೋಡ್ತಾ ಇದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಗೆ ಪಾಕಿಸ್ತಾನದ ಕುರ್ಚಿ ಸಿಗೋದು ಕೂಡ ಡೌಟ್ ಎನ್ನಲಾಗುತ್ತಿದೆ. ಅಷ್ಟೇ ಯಾಕೆ ಸಿಎಲ್ ಪಿ ನಾಯಕನ ಸ್ಥಾನದಿಂದಲೂ ಅವರನ್ನು ಕೆಳಗಿಳಿಸುವ ಬಗ್ಗೆಯು ಚರ್ಚೆ ನಡೆದಿದೆಯಂತೆ. ಅತ್ತ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಕೈಬಿಟ್ಟಿದೆ ಅಂತ ಹೇಳಲಾಗುತ್ತಿದೆ. ಯಾಕಂದ್ರೆ ಇತ್ತೀಚೆಗಷ್ಟೆ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯಗೆ ಸೋನಿಯಾಗಾಂಧಿ ಭೇಟಿ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಸಿದ್ದರಾಮಯ್ಯಗೆ ಸಿಗದ ಅವಕಾಶ ಪರಮೇಶ್ವರ್ ಗೆ ಸಿಕ್ಕಿತ್ತು. ಇದನ್ನೆಲ್ಲಾ ನೋಡ್ತಿದ್ರೆ ಜೆಡಿಎಸ್ ನಿಂದ ಬಂದು ಕಾಂಗ್ರೆಸ್ನ ಪ್ರಭಾವಿ ನಾಯಕನಾಗಿ ಬಳಿಕ ರಾಜ್ಯದ ಸಿಎಂ ಆದ ಸಿದ್ದರಾಮಯ್ಯ ಕಥೆ ಬಹುತೇಕ ಖತಂ ಆದಂತೆ ಕಾಣುತ್ತಿದೆ.

Contact Us for Advertisement

Leave a Reply