ನಿಗಾದಲ್ಲಿದ್ದ ದೆಹಲಿಯ 6 ಜನರಿಗೆ ಕೊರೋನಾ ವೈರಸ್​ ತಗುಲಿಲ್ಲ..!

ದೆಹಲಿ: ಕೊರೋನಾ ವೈರಸ್ ತಗುಲಿದ ವ್ಯಕ್ತಿ ಆಯೋಜಿಸಿದ್ದ ಬರ್ತ್​ಡೇ ಪಾರ್ಟಿಗೆ ಹೋಗಿ ಸೋಂಕು ತಗುಲಿದ ಶಂಕೆ ಹಿನ್ನೆಲೆ ತೀವ್ರ ನಿಗಾದಲ್ಲಿದ್ದ 6 ಜನರಿಗೆ ಕೊರೋನಾ ವೈರಸ್ ತಗುಲಿಲ್ಲ ಅಂತ ವರದಿ ಬಂದಿದೆ. ಅವರ ರಕ್ತದ ಮಾದರಿಗಳನ್ನ ಪರೀಕ್ಷೆಗಾಗಿ ಪುಣೆಯ ನ್ಯಾಷನಲ್​ ಇನ್ಸ್​ಟಿಟ್ಯೂಟ್ ಆಫ್​​ ವೈರಾಲಜಿಗೆ ಕಳಿಸಿಕೊಡಲಾಗಿತ್ತು. ಸದ್ಯ ಅದರ ರಿಪೋರ್ಟ್ ಬಂದಿದ್ದು ವೈರಸ್​​ ಟೆಸ್ಟ್​ನಲ್ಲಿ ನೆಗೆಟಿವ್ ಅಂತ ಬಂದಿದೆ. ಹೀಗಿದ್ದರೂ ಎಲ್ಲರನ್ನು 14 ದಿನಗಳ ಕಾಲ ಮನೆಯಲ್ಲಿರುವಂತೆ ನಿರ್ಬಂಧ ಹೇರಲಾಗಿದೆ. ಈ ಅವಧಿಯಲ್ಲಿ ರೋಗದ ಲಕ್ಷಣಗಳು ಉಲ್ಬಣಗೊಂಡರೆ ಅವರನ್ನ ಮತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ವೈರಸ್​ ತಗುಲಿದ ವ್ಯಕ್ತಿಯ ಇಬ್ಬರು ಮಕ್ಕಳು ಶಾಲೆಯ ಇತರ ಮಕ್ಕಳ ಜೊತೆ ಸಂಪರ್ಕಕ್ಕೆ ಬಂದಿದ್ದರಿಂದ ನೋಯ್ಡಾದ ಖಾಸಗಿ ಶಾಲೆಯಲ್ಲಿ ನಿನ್ನೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಶಾಲೆಗೆ ರಜೆ ನೀಡಿ, ಆವರಣವನ್ನ ಸ್ವಚ್ಛಗೊಳಿಸಲಾಗಿತ್ತು. ಸದ್ಯ ವೈರಸ್​ ತಗುಲಿರುವ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Contact Us for Advertisement

Leave a Reply