RSS, ಬಿಜೆಪಿ ವಿರುದ್ಧ ಸೋನಿಯಾ ಗಾಂಧಿ ಸಿಡಿಮಿಡಿ..!

ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯಂದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ RSS ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‍ನ ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆಲವರು ಇಂದು RSS ಅಂದ್ರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೇಶದ ಪ್ರತೀಕವನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಗಾಂಧೀಜಿಯವರ ವಿಚಾರಧಾರೆಗಳನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಆದ್ರೆ ಅದು ಎಂದೆಂದಿಗೂ ಸಾಧ್ಯವಿಲ್ಲ. ನಮ್ಮ ದೇಶದ ಅಡಿಪಾಯವೇ ಗಾಂಧೀಜಿ ತತ್ವಗಳಿಂದ ಕೂಡಿದೆ ಅಂತ ಹೇಳಿದ್ದಾರೆ.

ಮಹಾತ್ಮ ಗಾಂಧೀಜಿ ಇಡೀ ಪ್ರಪಂಚಕ್ಕೆ ಅಹಿಂಸೆಯನ್ನು ಪಾಲಿಸುವಂತೆ ಪ್ರೇರೇಪಿಸಿದ್ರು. ಇಂದು ಭಾರತ ಯಾವ ಹಂತಕ್ಕೆ ತಲುಪಿದೆಯೋ ಅದು ಗಾಂಧೀಜಿಯವರು ಹಾಕಿಕೊಟ್ಟ ಹಾದಿಯಲ್ಲಿ ನಡೆದು ತಲುಪಿದೆ. ಗಾಂಧೀಜಿಯವರ ಹೆಸರು ಬಳಸಿಕೊಳ್ಳೋದು ಸುಲಭ, ಆದ್ರೆ ಅವರ ಹಾದಿಯಲ್ಲಿ ಸಾಗೋದು ತುಂಬಾ ಕಷ್ಟ ಅಂತ ಪರೋಕ್ಷವಾಗಿ ಕೇಂದ್ರ ಸರ್ಕಾರ ಅಂದ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

Contact Us for Advertisement

Leave a Reply