ಬಿಸಿಸಿಐಗೆ ಹೊಸ ‘ದಾದಾ’..! ಅಧಿಕಾರ ಸ್ವೀಕರಿಸಿದ ಗಂಗೂಲಿ..

ದೆಹಲಿ: ಬಿಸಿಸಿಐಗೆ ಹೊಸ ಮುಖ್ಯಸ್ಥರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆಯ್ಕೆಯಾಗಿದ್ದಾರೆ. ಜೊತೆಗೆ ಗೃಹಸಚಿವ ಅಮಿತ್ ಶಾ ಪುತ್ರ ಜಯ್ ಶಾ ನೂತನ ಕಾರ್ಯದರ್ಶಿಯಾಗಿಯೂ, ಅರುಣ್ ಧುಮಾಲ್ ಖಜಾಂಚಿಯಾಗಿಯೂ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂರೂ ಹುದ್ದೆಗಳ ಆಯ್ಕೆಗೆ ಯಾವುದೇ ಚುನಾವಣೆ ನಡೆದಿಲ್ಲ. ಇವರ ವಿರುದ್ದವಾಗಿ ಯಾರೂ ನಾಮಪತ್ರವನ್ನೇ ಸಲ್ಲಿಸಿಲ್ಲವಾದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಹಾರಾಜ ಆಫ್ ವಿಜಿಯನಗರಂ ಬಳಿಕ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಕ್ರಿಕೆಟ್ ಆಟಗಾರ ಅನ್ನೋ ಹೆಗ್ಗಳಿಕೆಗೆ ಗಂಗೂಲಿ ಪಾತ್ರವಾಗಿದ್ದಾರೆ.

Contact Us for Advertisement

Leave a Reply