ಕಣಿವೆಯಲ್ಲಿ ಭದ್ರತಾ ಪಡೆಗಳಿಗೆ ಯಶಸ್ಸು.. ಮೂವರು ಉಗ್ರರು ಫಿನಿಶ್

masthmagaa.com:

ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಹೊಡೆದುರುಳಿಸುವ ಕಾರ್ಯಾಚರಣೆ ಮುಂದುವರೆದಿದೆ. ಇವತ್ತು ಪುಲ್ವಾಮಾದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಭಾರತೀಯ ಭದ್ರತಾ ಪಡೆಗಳು ಮೂವರು ಉಗ್ರರ ಹೆಡೆಮುರಿ ಕಟ್ಟಿದೆ. ಜೊತೆಗೆ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಉಗ್ರರೆಲ್ಲರೂ ಲಷ್ಕರ್-ಎ-ತೈಬಾ ಉಘ್ರ ಸಂಘಟನೆಗೆ ಸೇರಿದವರು ಅನ್ನೋದು ಗೊತ್ತಾಗಿದೆ. ಈ ಮೂಲಕ ಕಳೆದ 2 ದಿನದಲ್ಲಿ ಒಟ್ಟು ಐವರು ಉಗ್ರರನ್ನು ಹೊಡೆದುರುಳಿಸಿದಂತಾಗಿದೆ.

-masthmagaa.com

Contact Us for Advertisement

Leave a Reply