masthmagaa.com:

ಭಾರತದಲ್ಲಿ ಕೊರೋನಾ ಲಸಿಕೆಗೆ ಅನುಮೋದನೆ ಸಿಗುತ್ತಿದ್ದಂತೇ ಲಸಿಕೆ ಅಭಿಯಾನ ಕೂಡ ಆರಂಭವಾಗಲಿದೆ. ಆದ್ರೆ ಹೀಗೆ ಲಸಿಕೆ ಪಡೆದವರಲ್ಲಿ ಅಡ್ಡ ಪರಿಣಾಮಗಳು ಕಾಣಿಸೋದಿಲ್ಲ ಅನ್ನೋದನ್ನ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದಕ್ಕೂ ರೆಡಿಯಾಗಿರಬೇಕು ಅಂತ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಲಸಿಕೆ ಹಾಕಿದ ಬಳಿಕ ಅಡ್ಡ ಪರಿಣಾಮದಂತಹ ಕೆಲವೊಂದು ಘಟನೆ ನಡೆಯೋದು ಗಂಭೀರ ವಿಚಾರ. ದೇಶದಲ್ಲಿ ಈ ಹಿಂದೆ ಬೇರೆ ಬೇರೆ ಕಾಯಿಲೆಗೆ ಸಂಬಂಧಿಸಿದಂತೆ ಲಸಿಕೆ ಅಭಿಯಾನ ನಡೆಸಿದಾಗಲೂ ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಅಡ್ಡಪರಿಣಾಮ ಕಾಣಿಸಿಕೊಂಡಿತ್ತು. ಹೀಗಾಗಿ ಕೊರೋನಾ ಲಸಿಕೆ ಅಭಿಯಾನ ಶುರುವಾದ ಬಳಿಕವೂ ಅಡ್ಡಪರಿಣಾಮ ಕಾಣಿಸೋದಿಲ್ಲ ಅನ್ನೋದನ್ನ ತಳ್ಳಿ ಹಾಕುವಂತಿಲ್ಲ. ಈಗಾಗಲೇ ಕೊರೋನಾ ಲಸಿಕೆ ಹಾಕುತ್ತಿರುವ ಬ್ರಿಟನ್ ಮುಂತಾದ ದೇಶಗಳಲ್ಲಿ ಮೊದಲ ದಿನವೇ ಅಡ್ಡ ಪರಿಣಾಮದ ಘಟನೆಗಳು ವರದಿಯಾಗಿವೆ. ಹೀಗಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದಕ್ಕೂ ರೆಡಿಯಾಗಿರಬೇಕು ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಉಳಿದಂತೆ ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ 29,000 ಕೋಲ್ಡ್​ಚೈನ್​ ಪಾಯಿಂಟ್ಸ್, 240 ವಾಕ್​-ಇನ್ ಕೂಲರ್ಸ್, 70 ವಾಕ್​-ಇನ್ ಫ್ರೀಜರ್ಸ್, 45,000 ಐಸ್​-ಲೈನ್ಡ್​ ರೆಫ್ರಿಜರೇಟರ್ಸ್, 41,000 ಡೀಪ್ ಫ್ರೀಜರ್ಸ್ ಮತ್ತು 300 ಸೋಲಾರ್ ರೆಫ್ರಿಜರೇಟರ್​​ಗಳನ್ನ ಬಳಸಲಾಗುತ್ತೆ. ಇವುಗಳು ಈಗಾಗಲೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನ ತಲುಪಿವೆ ಅಂತ ರಾಜೇಶ್ ಭೂಷಣ್ ಹೇಳಿದ್ಧಾರೆ.

-masthmagaa.com

Contact Us for Advertisement

Leave a Reply