JEE ಮತ್ತು NEET ಪರೀಕ್ಷೆ ಕುರಿತು ಕೇಂದ್ರ ಶಿಕ್ಷಣ ಸಚಿವರು ಹೇಳಿದ್ದೇನು..?

masthmagaa.com:

ಕೊರೋನಾ ಹಾವಳಿ ಹಿನ್ನೆಲೆ JEE ಮತ್ತು NEET ಪರೀಕ್ಷೆಗಳನ್ನ ಮುಂದೂಡಬೇಕು ಅನ್ನೋ ಕೂಗು ದೇಶಾದ್ಯಂತ ಕೇಳಿ ಬರ್ತಿರುವ ನಡುವೆಯೇ ಪರೀಕ್ಷೆಗಳು ನಡೆಯಲಿ ಅನ್ನೋದು ವಿದ್ಯಾರ್ಥಿಗಳ ಆಸೆ ಅಂತ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.

JEE ಬರೆಯಲಿರುವ ಒಟ್ಟು 8.58 ಲಕ್ಷ ವಿದ್ಯಾರ್ಥಿಗಳಲ್ಲಿ 7.50 ಲಕ್ಷ ವಿದ್ಯಾರ್ಥಿಗಳು ಕಳೆದ 24 ಗಂಟೆಗಳಲ್ಲಿ ತಮ್ಮ ಅಡ್ಮಿಟ್ ಕಾರ್ಡ್​ ಡೌನ್​ಲೋಡ್ ಮಾಡಿದ್ದಾರೆ. ಅದೇ ರೀತಿ NEET ಬರೆಯಲಿರುವ ಒಟ್ಟು 15.97 ಲಕ್ಷ ವಿದ್ಯಾರ್ಥಿಗಳಲ್ಲಿ 10 ಲಕ್ಷ ವಿದ್ಯಾರ್ಥಿಗಳು ಅಡ್ಮಿಟ್​ ಕಾರ್ಡ್​ ಡೌನ್​ಲೋಡ್ ಮಾಡಿದ್ದಾರೆ. ಇದರ ಅರ್ಥ ಅಟ್ ಎನಿ ಕಾಸ್ಟ್ ಪರೀಕ್ಷೆ ನಡೆಯಲಿ ಅನ್ನೋದು ವಿದ್ಯಾರ್ಥಿಗಳ ಆಸೆ ಅಂತ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.

ಇನ್ನು ಈ ಬಾರಿಯ ಪರೀಕ್ಷೆ ಮೇಲೆ ಕೊರೋನಾ ಕರಿನೆರಳು ಆವರಿಸಿರೋದ್ರಿಂದ ಪರೀಕ್ಷಾ ಕೇಂದ್ರಗಳನ್ನ ಕೂಡ ಹೆಚ್ಚಿಸಲಾಗಿದೆ ಅಂತ ಮಾಹಿತಿ ನೀಡಿದ್ರು. 570 ಇದ್ದ JEE ಎಕ್ಸಾಂ ಸೆಂಟರ್​ಗಳನ್ನ 660ಕ್ಕೆ ಹೆಚ್ಚಿಸಲಾಗಿದೆ. 2,546 ಇದ್ದ NEET ಎಕ್ಸಾಂ ಸೆಂಟರ್​ಗಳನ್ನ 3,842ಕ್ಕೆ ಏರಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ತಮಗಿಷ್ಟದ ಪರೀಕ್ಷಾ ಕೇಂದ್ರಗಳನ್ನ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂದಿದ್ದಾರೆ.

-masthmagaa.com

Contact Us for Advertisement

Leave a Reply